India
ಇಂಗ್ಲೇಂಡಿನಿಂದ ಬರಲಿದೆ 100 ಟನ್ ಚಿನ್ನ.
ನವದೆಹಲಿ: ಭಾರತದ ಕೇಂದ್ರ ಬ್ಯಾಂಕ್ ಆದಂತಹ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಇಂಗ್ಲೆಂಡ್‌ನಿಂದ ತನ್ನ 100 ಟನ್ ಚಿನ್ನವನ್ನು ಭಾರತಕ್ಕೆ ಸ್ಥಳಾಂತರ ಮಾಡುತ್ತಿದೆ. ಇದರ ಮೂಲಕ ಬ್ಯಾಂಕ್ ಆಫ್ ಇಂಗ್ಲೆಂಡ್ ಗೆ ವಾರ್ಷಿಕವಾಗಿ ಪಾವತಿಸಬೇಕಿದ್ದ ಸ್ಟೋರೇಜ್ ಖರ್ಚಿನಿಂದ ಮುಕ್ತಿ ಹೊಂದಲಿದೆ ಭಾರತ.
ಈ ರೀತಿಯ ನಿರ್ಣಯ 1991ರ ನಂತರ ಮೊದಲ ಬಾರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತೆಗೆದುಕೊಂಡಿದೆ. ಸದ್ಯದಲ್ಲೇ 100 ಟನ್ ಭಾರತದ ಚಿನ್ನ ನಮ್ಮ ಖಜಾನೆ ಸೇರಲಿದೆ.