IndiaNational

19 ವರ್ಷಕ್ಕೆ ಗರ್ಭಿಣಿಯಾದ ಯುವತಿ: ಮದುವೆಯಾಗು ಎಂದಿದ್ದಕ್ಕೆ ಪ್ರಿಯಕರನಿಂದಲೇ ಕೊಲೆ..?!

ರೋಹ್ತಕ್: ದೇಶವನ್ನೇ ಬೆಚ್ಚಿಬೀಳಿಸಿರುವ ಘಟನೆ, ಹರಿಯಾಣದ ರೋಹ್ತಕ್‌ನ 21 ವರ್ಷದ ಸಂಜು ಅಲಿಯಾಸ್‌ ಸಲೀಂ, ತನ್ನ 19 ವರ್ಷದ ಗರ್ಭಿಣಿ ಪ್ರಿಯತಮೆಯಾದ ಸೋನಿಯಾ ಕುಮಾರಿ ಅವರನ್ನು ಹತ್ಯೆಗೈದು ಹೊಲದಲ್ಲಿ ಹೂತಿದ್ದಾನೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧಕ್ಕೆ ಪೋಷಕರ ಒಪ್ಪಿಗೆಯಿಲ್ಲವೆಂದು ಕಾರಣ ಹೇಳಿ ಮದುವೆಗೆ ನಿರಾಕರಿಸಿದ್ದ ಸಲೀಂ, ಸೋನಿಯಾ ಗರ್ಭಿಣಿ ಎಂದು ಗೊತ್ತಾದಾಗ, ಆಕೆಯನ್ನು ಗರ್ಭಪಾತ ಮಾಡಲು ಒತ್ತಾಯಿಸಿದ್ದ ಎಂಬುದು ತಿಳಿದು ಬಂದಿದೆ.

ಮದುವೆಯ ಒತ್ತಡದಿಂದ ಹತ್ಯೆ:

ಕರ್ವಾ ಚೌಥ್ ದಿನ, ಪ್ರೇಮಿಯನ್ನು ಮದುವೆಯಾಗಲು ಒತ್ತಾಯಿಸಲು ಸೋನಿಯಾ ಸಲೀಂನನ್ನು ಭೇಟಿಯಾಗಿದ್ದರು. ಆದರೆ, ಆಕೆಯ ಮಿಸ್ಸಿಂಗ್ ದೂರು ಅಕ್ಟೋಬರ್ 22 ರಂದು ಸಹೋದರ ಮನೀಷ್ ಪೊಲೀಸ್‌ ಠಾಣೆಗೆ ನೀಡಿದ ಬಳಿಕ, ಆಕೆಯ ದುರಂತ ಸಾವು ಬೆಳಕಿಗೆ ಬಂದಿತು. ಮನೀಷ್, ಸೋನಿಯಾ ನಾಪತ್ತೆಯ ಹಿಂದೆ ಸಂಜು ಅಲಿಯಾಸ್‌ ಸಲೀಂನ ಕೈವಾಡವಿದೆ ಎಂದು ಶಂಕಿಸಿದ್ದನು. ಅದಾದ ನಂತರ ಪೊಲೀಸರು ತನಿಖೆ ಆರಂಭಿಸಿದರು.

ತನಿಖೆಯ ವಿವರ:

ಅಕ್ಟೋಬರ್ 23 ರಂದು ಮನೀಷ್ ಸಂಜುನ ಮನೆಯ ಹುಡುಕಿಕೊಂಡು ತೆರಳಿ, ಆತನ ನಿಜ ಹೆಸರು ‘ಸಲೀಂ’ ಎಂಬ ಸಂಗತಿಯನ್ನು ಪತ್ತೆ ಹಚ್ಚಿದರು. ಅಕ್ಟೋಬರ್ 24 ರಂದು ಪೊಲೀಸರು ಸಲೀಂ ಮತ್ತು ಆತನ ಸ್ನೇಹಿತ ಪಂಕಜ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿ, ಅವರೆಲ್ಲರೂ ಈ ಕ್ರೈಂ ನಲ್ಲಿ ಒಂದಾಗಿದ್ದರು ಎಂದು ತಿಳಿಯಿತು.

ತಂತ್ರಜ್ಞಾನದಿಂದ ಅಪರಾಧಿಗಳ ಪತ್ತೆ:

ಪೊಲೀಸರು ಈಗ ಆಟೋಪ್ಸಿ ವರದಿಗಾಗಿ ಕಾಯುತ್ತಿದ್ದಾರೆ, ಇದು ಸೋನಿಯಾ ಗರ್ಭಿಣಿಯಾಗಿದ್ದುದನ್ನು ದೃಢಪಡಿಸಲಿದೆ. ಸಲೀಂಗೆ ನೆರವು ನೀಡಿದ ಇನ್ನೂ ಒಬ್ಬ ಅಪರಾಧಿ ರಿತಿಕ್‌ ನನ್ನು ಹುಡುಕುತ್ತಿದ್ದಾರೆ.

ಪೋಷಕರ ಬೇಸರ:

ಸೋನಿಯಾ ತಾಯಿ ಆಕ್ರೋಶದಿಂದ, “ನಮಗೆ ನ್ಯಾಯ ಬೇಕು!” ಎಂದು ಬೇಡಿಕೆ ಇಟ್ಟಿದ್ದಾರೆ. ಹೆಣ್ಣು ಮಕ್ಕಳು ಅಪರಿಚಿತ ವ್ಯಕ್ತಿಗಳ ಜೊತೆ ವ್ಯವಹರಿಸಬೇಕಿದ್ದರೆ ಆದಷ್ಟು ಕಾಳಜಿ ವಹಿಸುವುದು ಅಗತ್ಯ ಎಂದು ಈ ಪ್ರಕರಣ ಪಾಠ ಕಲಿಸುತ್ತದೆ.

Show More

Leave a Reply

Your email address will not be published. Required fields are marked *

Related Articles

Back to top button