2024 ವಿಶ್ವದಲ್ಲೆಡೆ ಚುನಾವಣಾ ವರ್ಷ: ಜಾಗತಿಕ ವ್ಯವಸ್ಥೆ ರೂಪಿಸಬಲ್ಲ 6 ಚುನಾವಣೆಗಳು.
2024 ಜಾಗತಿಕ ಮಟ್ಟದಲ್ಲಿ ಅತ್ಯಂತ ಮಹತ್ವದ ಚುನಾವಣೆಗಳಿಗೆ ಸಾಕ್ಷಿಯಾಗಲಿದೆ. ಭಾರತ, ಯುನೈಟೆಡ್ ಸ್ಟೇಟ್ಸ್, ರಷ್ಯಾ, ಯುನೈಟೆಡ್ ಕಿಂಗ್‌ಡಮ್, ಬಾಂಗ್ಲಾದೇಶ, ಪಾಕಿಸ್ತಾನ, ಮೆಕ್ಸಿಕೊ, ದಕ್ಷಿಣ ಆಫ್ರಿಕಾ ಸೇರಿದಂತೆ ಅಂದಾಜು 40 ರಾಷ್ಟ್ರಗಳಲ್ಲಿ ಚುನಾವಣೆ ನಡೆಯಲಿವೆ. ಇದರರ್ಥ ವಿಶ್ವ ಜನಸಂಖ್ಯೆಯ 41% ಹಾಗೂ GDPಯ 42% ನ ಜಾಗತಿಕ ವ್ಯವಸ್ಥೆಯಲ್ಲಿ ಪ್ರಮುಖ ಬೆಳವಣಿಗೆ ಆಗಲಿವೆ. ಹೀಗಾಗಿ, 2024ರ ವರ್ಷ ಇತಿಹಾಸದಲ್ಲಿ ತನ್ನದೇ ಆದ ಮಹತ್ವ ಹೊಂದಲಿದೆ.
ಭಾರತದ ಸಾರ್ವತ್ರಿಕ ಚುನಾವಣೆಗಳು:
2024 ರ ಲೋಕಸಭಾ ಚುನಾವಣೆಯ ಭಾರತೀಯ ಜನತಾ ಪಕ್ಷ (BJP) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಕಾಂಗ್ರೆಸ್(INC), ಆಮ್ ಆದ್ಮಿ ಪಕ್ಷ (AAP), ತೃಣಮೂಲ ಕಾಂಗ್ರೆಸ್ (TMC) ಮತ್ತು ಇತರ ಪ್ರತಿಪಕ್ಷಗಳ INDIA ಒಕ್ಕೂಟದೊಂದಿಗೆ ಸೆಣಸಲಿದೆ. ಇತ್ತೀಚಿಗೆ ಮುಕ್ತಾಯಗೊಂಡ ರಾಜ್ಯ ವಿಧಾನಸಭೆಗಳು ಲೋಕಸಭೆ ಚುನಾವಣೆಗೆ ದಿಕ್ಸೂಚಿ ಆಗಿದ್ದರೆ, ಅದು 2024 ರ ಲೋಕಸಭೆ ಚುನಾವಣೆಯಲ್ಲಿನ ಆಸಕ್ತಿಯನ್ನು ದುಪ್ಪಟ್ಟುಗೊಳಿಸಿದೆ. ಭಾರತವು ತನ್ನ ಆಯ್ಕೆಗಳಲ್ಲಿ ತದ್ವಿರುದ್ಧವಾದ ಾಯ್ಕೆಗಳನ್ನು ತೋರುತ್ತಿದ್ದು, ಕೇಸರಿ ಪಕ್ಷವು ಉತ್ತರ ಭಾರತದಲ್ಲಿ ಬಿಹಾರ ಮತ್ತು ಪಶ್ಚಿಮ ಬಂಗಾಳವನ್ನು ಹೊರತುಪಡಿಸಿ ಆಡಳಿತದಲ್ಲಿದ್ದರೆ, ಭಾರತದ ದಕ್ಷಿಣ ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡು,ತೆಲಂಗಾಣಗಳಲ್ಲಿ INDIA ಪಕ್ಷಗಳು, ಆಂಧ್ರ ಪ್ರದೇಶದಲ್ಲಿ ಪ್ರಾದೇಶಿಕ ಪಕ್ಷಗಳ ಪಾರುಪತ್ಯವಿದ್ದು ಬಿಜೆಪಿ ಯಾವುದೇ ಅಧಿಕಾರ ಹೊಂದಿಲ್ಲ.
ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷೀಯ ಚುನಾವಣೆಗಳು 2024:
ಡೆಮಾಕ್ರಟ್ಸ್ ನಾಯಕ ಹಾಲಿ ಅಧ್ಯಕ್ಷ ಜೋ ಬೈಡನ್ USನ ಮುಖ್ಯಸ್ಥರಾಗಿ ಎರಡನೇ ಅವಧಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಲಿದ್ದಾರೆ, ರಿಪಬ್ಲಿಕನ್ ಪಕ್ಷದಿಂದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕಣದಲ್ಲಿದ್ದ ಭಾರತೀಯ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ ಅವರು ಟ್ರಂಪ್‌ಗೆ ಬೆಂಬಲ ಸೂಚಿಸಿದ್ದಾರೆ.
ಯುನೈಟೆಡ್ ಕಿಂಗ್‌ಡಮ್ ಚುನಾವಣೆಗಳು 2024:
‘ಕೋವಿಡ್-ಗೇಟ್’ ಆರೋಪದಲ್ಲಿ ಬೋರಿಸ್ ಜಾನ್ಸನ್ ರಾಜೀನಾಮೆ ನಂತರ, ಲಿಜ್ ಟ್ರಸ್ ಅಲ್ಪಾವಧಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಟ್ರಸ್ ಅವರ ರಾಜೀನಾಮೆ ನಂತರ ರಿಷಿ ಸುನಕ್‌ಗೆ ಪ್ರಧಾನಿ ಪಟ್ಟ ಒಲಿಯಿತು. ಇತ್ತಿಚೀನ ದಿನಗಳಲ್ಲಿ ಪಿಎಂ ರಿಷಿ ಸುನಕ್ ಅವರ ಮೇಲೆ ಜನರು ತಮ್ಮ ಒಲವನ್ನು ಕಳೆದುಕೊಂಡಿದ್ದಾರೆ, ಪ್ರಧಾನಿ ರಿಷಿ ಸುನಕ್ ನೇತೃತ್ವದ ಸರ್ಕಾರದ ವಿರುದ್ಧ ಆಕ್ರಮಣಕಾರಿ ಅಭಿಯಾನವನ್ನು ನಡೆಸುತ್ತಿರುವ ಲೇಬರ್ ಪಕ್ಷದ ಪರ ಜನರು ವಾಲುತ್ತಿದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ.
ಭಾರತದಲ್ಲಿ ಲೋಕಸಭೆ ಚುನಾವಣೆ 2024:
ರಷ್ಯಾ ಅಧ್ಯಕ್ಷೀಯ ಚುನಾವಣೆ 2024:
ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ವಿರೋಧ ಪಕ್ಷದ ಅನುಪಸ್ಥಿತಿಯಲ್ಲೇ 6ನೇ ಅವಧಿಗೆ ತಮ್ಮ ಉಮೇದುವಾರಿಕೆಯನ್ನು ಘೋಷಿಸಲಿದ್ದಾರೆ. ಬಂಧನಕ್ಕೊಳಗಾಗಿದ್ದ ವಿರೋಧ ಪಕ್ಷದ ನಾಯಕ ಮತ್ತು ಕ್ರೆಮ್ಲಿನ್ ವಿಮರ್ಶಕ ಅಲೆಕ್ಸಿ ನವಲ್ನಿ ಅವರ ಅನುಮಾನಾಸ್ಪದ ಸಾವೀಗೀಡಾಗಿದ್ದು ಪುಟಿನ್‌ಗೆ ಯವುದೇ ಪರ್ಯಾಯ ನಾಯಕರಿಲ್ಲದಂತೆ ಕಂಡು ಬರುತ್ತಿದೆ. ಹೀಗಾಗಿ, ರಷ್ಯಾದ ಜನರಿಗೆ ಪುಟಿನ್‌ಹೊರತು ಯಾವುದೇ ಅನ್ಯ ಆಯ್ಕೆ ಇದ್ದಂತೆ ತೋರುತ್ತಿಲ್ಲ.
ಪಾಕಿಸ್ತಾನ ಸಂಸತ್ತಿನ ಚುನಾವಣೆಗಳು 2024:
ಭ್ರಷ್ಟಾಚಾರದ ಆರೋಪದ ಮೇಲೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಆಡಳಿತದಿಂದ ತೆಗೆದುಹಾಕಲಾದ ನಂತರ ಮತ್ತು ʼತೋಷಖಾನಾʼ ಪ್ರಕರಣದೊಂದಿಗೆ ಪಾಕಿಸ್ತಾನ ಸರ್ಕಾರ ಗೊಂದಲದಲ್ಲಿ ಸಿಲುಕಿತು. ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರನ್ನು ಚುನಾಯಿಸಲು 2024ರ ಫೆಬ್ರವರಿ 8 ರಂದು ಸಾರ್ವತ್ರಿಕ ಚುನಾವಣೆಗಳು ನಡೆದವು. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನದಲ್ಲಿದ್ದರೂ, ಗೋಹರ್ ಅಲಿ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) 93ರ ಸಂಖ್ಯೆಯೊಂದಿಗೆ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ, ಮಾಜಿ ಪ್ರಧಾನಿ ನವಾಜ್ ಷರೀಫ್ ನೇತೃತ್ವದ ಪಾಕಿಸ್ತಾನ್ ಮುಸ್ಲಿಂ ಲೀಗ್ (ಎನ್) (ಪಿಎಂಎಲ್ (ಎನ್)) 75, ಮತ್ತು ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ನೇತೃತ್ವದ ಪಕ್ಷ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ(ಪಿಪಿಪಿ) 54 ರ ಸಂಖ್ಯೆ ತಲುಪಿದವು. ಇದರೊಂದಿಗೆ 42 ಪಕ್ಷೇತರರ ಪೈಕಿ ಬಹುತೇಕರು ಇಮ್ರಾನ್ ಖಾನ್ ಪಕ್ಷದ ಬೆಂಬಲಿಗರು ಎನ್ನುವುದು ವಿಶೇಷ. ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆ 2024:
2024ರ ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಗಳನ್ನು, 2024ರ ಜನವರಿ 7ರಂದು ನಡೆದ ಚುನಾವಣೆಗಳಲ್ಲಿ ಶೇಖ್ ಹಸೀನಾ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಅಂತರರಾಷ್ಟ್ರೀಯ ಗಮನ ಸೆಳೆಯಲು ಶೇಖ್ ಹಸೀನಾ ನೇತೃತ್ವದ ಸರ್ಕಾರ ಬೃಹತ್ ರ‍್ಯಾಲಿಗಳನ್ನು ಆಯೋಜಿಸಿತ್ತು. ಮುಖ್ಯವಾಗಿ, ಎಲ್ಲಾ ಪ್ರಮುಖ ವಿರೋಧ ಪಕ್ಷಗಳು ಸಾರ್ವತ್ರಿಕ ಚುನಾವಣೆಗಳನ್ನು ವಿರೋಧಿಸುತ್ತಿದ್ದೂ, ಇದು ಬಹುತೇಕ ವಿರೋಧ ಪಕ್ಷದ ನಾಯಕರ ಸಾಮೂಹಿಕ ಬಂಧನಕ್ಕೆ ಕಾರಣವಾಗಿತ್ತು.
ಮೆಕ್ಸಿಕನ್ ಸಾರ್ವತ್ರಿಕ ಚುನಾವಣೆ 2024:
2 ಜೂನ್ 2024 ರಂದು ಮೆಕ್ಸಿಕೋದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ಮತದಾರರು ಆರು ವರ್ಷಗಳ ಅವಧಿಗೆ ಸೇವೆ ಸಲ್ಲಿಸಲು ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ, ಚೇಂಬರ್ ಆಫ್ ಡೆಪ್ಯೂಟೀಸ್‌ನ ಎಲ್ಲಾ 500 ಸದಸ್ಯರು ಮತ್ತು ಗಣರಾಜ್ಯದ ಸೆನೆಟ್‌ಆಫ್‌ರಿಪಬ್ಲಿಕ್‌ನ ಎಲ್ಲಾ 128 ಸದಸ್ಯರ ಆಯ್ಕೆಗಾಗಿ ಚುನಾವಣೆ ನಡೆಯಲಿವೆ.