Bengaluru
ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ 53 ಲಕ್ಷದ ಆಭರಣ ಕಳ್ಳತನ: ಮನೆಕೆಲಸದಾಕೆ ತೋರಿಸದ ಕೈಚಳಕ..?!

ಬೆಂಗಳೂರು: ವೈಟ್‌ಫೀಲ್ಡ್ ಪೊಲೀಸರು ದೊಡ್ಡ ಮಟ್ಟದ ಕಳ್ಳತನ ಪ್ರಕರಣವನ್ನು ಭೇದಿಸಿ, 53 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಕದ್ದಿದ್ದ ಮನೆಕೆಲಸದಾಕೆಯನ್ನು ಬಂಧಿಸಿದ್ದಾರೆ. ಸೆಪ್ಟೆಂಬರ್ 9ರಂದು ಮನೆಯಲ್ಲಿನ ಚಿನ್ನ, ವಜ್ರ, ಬೆಳ್ಳಿ ವಸ್ತುಗಳು ಕಾಣೆಯಾಗಿರುವುದನ್ನು ಗಮನಿಸಿದ ಮನೆಯೊಡೆಯರು ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಯು ಮನೆಯ ಕಬೋರ್ಡ್ ನಿಂದ ಈ ವಸ್ತುಗಳನ್ನು ಕದ್ದಿದ್ದು, ತನ್ನ ತಾಯ್ನಾಡಾದ ಬಿಹಾರಕ್ಕೆ ಸಾಗಿಸಲು ಸಿದ್ಧತೆ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.
ಆರೋಪಿಯನ್ನು ಬಂಧಿಸಿರುವ ಪೊಲೀಸರು, 13 ಗ್ರಾಂ ವಜ್ರ, 570 ಗ್ರಾಂ ಚಿನ್ನ, 470 ಗ್ರಾಂ ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ. ಈ ಘಟನೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಹಲವು ಕಳ್ಳತನ ಪ್ರಕರಣಗಳನ್ನು ಬೆನ್ನಟ್ಟಿದ ತಲಾಘಟ್ಟಪುರ, ಬೊಮ್ಮನಹಳ್ಳಿ, ಬೈದರಹಳ್ಳಿ, ಹನುಮಂತನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲೂ ಪತ್ತೆಹಚ್ಚಲಾಗಿದೆ. ಈಗಾಗಲೇ 5 ಕಳ್ಳರನ್ನು ಬಂಧಿಸಿರುವ ಪೊಲೀಸರು, ವಿವಿಧ ಕಳ್ಳತನ ಪ್ರಕರಣಗಳಲ್ಲಿ ಮಹತ್ವದ ಬೆಳವಣಿಗೆ ಮೂಡಿಸಿದ್ದಾರೆ.