Notice: Function _load_textdomain_just_in_time was called incorrectly. Translation loading for the yotuwp-easy-youtube-embed domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home/u700529020/domains/akeynews.com/public_html/wp-includes/functions.php on line 6121

Notice: Function _load_textdomain_just_in_time was called incorrectly. Translation loading for the pods domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home/u700529020/domains/akeynews.com/public_html/wp-includes/functions.php on line 6121
- Akey News
Alma Corner

beware about using mobile benifitsofmobile,usesofmobile,disadvantegesofmobile,howtousemobail benifitsofmobile,usesofmobile,disadvantegesofmobile,howtousemobail

ಅಂಗೈ ಗಿಣಿ ಕಚ್ಚೀತು ಜೋಕೆ…..!

ಇವತ್ತು ನಾವು ಏಳುವ ಅಲಾರಾಮ್‌ನಿಂದ ಹಿಡಿದು ಮಲಗುವ ಬೆಡ್‌ ಟೈಮ್‌ ವರೆಗೂ ನಾವು ಅವಲಂಬಿತವಾಗಿರುವುದು ಜಂಗಮವಾಣಿ ಅಂದರೆ ಮೊಬೈಲ್‌ ಮೇಲೆ. ಇವತ್ತಿನ ದಿನಗಳಲ್ಲಿ ಯಾವ ವಸ್ತು ನಮಗೆ ಅನಿವಾರ್ಯ ಇದೆಯೋ ಇಲ್ಲವೋ ಆದರೆ ಮೊಬೈಲ್‌ನಂತು ಒಂದು ಕ್ಷಣ ಬಿಟ್ಟಿರಲು ಸಾಧ್ಯವಾಗದೆ ಇರುವಷ್ಟು ಅನಿವಾರ್ಯತೆ ಇದೆ. ಒಂದು ಹಂತದಲ್ಲಿ ಆ ಅನಿವಾರ್ಯತೆಯನ್ನು ಸೃಷ್ಠಿಸಿಕೊಂಡಿದ್ದು ಮನುಷ್ಯನಾ? ಬದಲಾಗುತ್ತಿರುವ ತಂತ್ರಜ್ಙಾನವಾ? ಅಥವಾ ಕಾಲಕ್ಕೆ ತಕ್ಕಂತೆ ಬದಲಾಗಬೇಕೆಂಬ ಮನಸ್ಥಿತಿಯಾ? ಏನೋ ?
ಆದರೆ ಇಂದು ನಾವು ಎಷ್ಟು ಮೊಬೈಲ್‌ ಮೇಲೆ ಅವಲಂಬಿತರಾಗಿದ್ದೇವೆ ಎಂದರೆ ದಿನದ 24 ಗಂಟೆಗಳಲ್ಲಿ ಕನಿಷ್ಟ ಎಂದರು 10 ಗಂಟೆಗಳ ಕಾಲ ಅದರಲ್ಲಿಯೇ ಸಮಯವನ್ನು ಕಳಿಯುತ್ತಿದ್ದೇವೆ. ಮೊಬೈಲ್‌ ಮುಂದೆ ಕೂತರೆ ಅಕ್ಕಪಕ್ಕದ ಆಗು-ಹೋಗುಗಳನ್ನು ಮರೆಯುವಷ್ಟು ಪ್ರಜ್ಙಾಹೀನರಾಗುತ್ತಿದ್ದೇವೆ. ಮೊಬೈಲ್‌ ಮುಂದೆ ಯಾವ ಸಂಭಂದಗಳು ನಮಗೆ ಅವಶ್ಯಕ ಅನ್ನಿಸುತ್ತಿಲ್ಲ. ಮೊಬೈಲೇ ಇವತ್ತು ನಮಗೆಲ್ಲವೂ ಆಗಿ ಹೋಗಿದೆ. ಯಾರು ಇಲ್ಲದೆ ಇದ್ದರು ಮೊಬೈಲ್‌ ಒಂದಿದ್ದರೆ ಸಾಕು ಎನ್ನುವ ಮಟ್ಟಿಗೆ ಇಗೀನ ತಲೆಮಾರು ಬಂದು ನಿಂತಿದೆ. ಇಂದು ಮದುವೆಗೆ ಕಳಿಸುವ ಆಮಂತ್ರಣ, ಹಾರೈಕೆ, ಬೇಕಾಗುವಂತಹ ವಸ್ತುಗಳು ,ಊಟ,ಬಟ್ಟೆ, ಬೇಕಾಗುವಂತಹ ಮಾಹಿತಿ, ಮನರಂಜನೆ, ಜ್ಙಾನ, ಸಂದೇಶ, ಪ್ರಪಂಚದ ಆಗುಹೋಗುಗಳು ಹೀಗೆ ಬೆಳಿಗ್ಗೆ ಏದ್ದಾಗಿನಿಂದ ಮಲಗುವವರೆಗೆ ನಮ್ಮ ಮೂಲಭೂತವಾದಂತಹ ಅವಶ್ಯಕತೆಗಳು ಪೂರೈಕೆ ಆಗುವುದು ನಮ್ಮ ಅಂಗೈನಲ್ಲಿರುವ ಮೊಬೈಲ್‌ನಿಂದ.
ಮೊಬೈಲ್‌ನಿಂದ ಎಷ್ಟು ಪ್ರಯೋಜನಗಳು ಇವೆಯಲ್ಲಾ ಎನಿಸಬಹುದು. ಆದರೆ ಇಂದಿನ ತಲೆಮಾರು ಮೊಬೈಲ್‌ನ್ನು ಒಳ್ಳೆಯದಕ್ಕೆ ಬಳಸುವುದಕ್ಕಿಂತ ಕೆಟ್ಟ ಕೆಲಸಗಳಿಗೆ ಬಳಸುವುದು ಹೆಚ್ಚಾಗಿದೆ. ಮೊಬೈಲ್‌ ಕೊಡಿಸಿಲ್ಲ, ಮೊಬೈಲ್‌ ರಿಚಾರ್ಜ ಮಾಡಿಸಿಲ್ಲ ಎಂದು ಆತ್ಮಹತೈ ಮಾಡಿಕೊಂಡವರು ಇದ್ದಾರೆ, ಅಪ್ಪ ಅಮ್ಮನನ್ನೆ ಕೊಂದವರು ಇದ್ದಾರೆ. ಇಂತಹ ಪ್ರಕರಣಗಳನ್ನು ಪ್ರತಿನಿತ್ಯ ನಾವು ಪತ್ರಿಕೆಗಳಲ್ಲಿ ನೋಡುತ್ತಲೇ ಇರುತ್ತೇವೆ. ಮೊಬೈಲ್‌ ಇಲ್ಲದೇ ಜೀವನವೇ ಇಲ್ಲ ಎಂಬಂತಹ ಮನಸ್ಥಿತಿ ಕೆಲವರದ್ದಾಗಿದೆ. ಇಂದು ನಾವು ಬಳಸುವಂತಹ ಮೊಬೈಲ್‌ನಲ್ಲಿ ನಮ್ಮ ಪ್ರತಿಯೊಂದು ವಿಚಾರಗಳನ್ನು ಸಂಗ್ರಹ ಮಾಡಿ ಇಟ್ಟಿರುತ್ತೇವೆ. ಅವುಗಳ ರಕ್ಷಣೆಗೆ ಏನೇನೋ ತಂತ್ರಗಳನ್ನ ಉಪಯೋಗಿಸುತ್ತೇವೆ. ಆದರೆ ಅದು ಎಷ್ಟರ ಮಟ್ಟಿಗೆ ಸೆಫ್? 2014 ರಲ್ಲಿ ಸರಾಸರಿ ಒಂದು ದಿನಕ್ಕೆ 7000 ಸೈಬರ್‌ ಕ್ರೈಮ್‌ಗಳು ನಡೆದಿವೆ. ಇದರ ಸಂಖೈ ಪ್ರತಿವರ್ಷ ಹೆಚ್ಚಾಗುತ್ತಲೇ ಇದೆ. ಈ ಸೈಬರ್‌ ಕ್ರೈಮ್‌ನ ಜಾಲಕ್ಕೆ ಬಿದ್ದು ಎಷ್ಟೋ ಜನ ಅವರ ಜೀವನವನ್ನೇ ಅಂತ್ಯಗೊಳಿಸಿದ್ದಾರೆ.
ಇನ್ನು ಆರೋಗ್ಯದ ವಿಷಯಕ್ಕೆ ಬಂದರೆ ಮೊಬೈಲ್‌ನ್ನು ಹೆಚ್ಚು ಬಳಸುತ್ತಿರುವುದರಿಂದ 48% ರಷ್ಟು ಖಿನ್ನತೆ ಮತ್ತು ಒತ್ತಡದಿಂದ ಬಳಲುತ್ತಿದ್ದಾರೆ. ವಯಸ್ಕರಲ್ಲಿ 23.08% ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕಣ್ಣಿನ ಸಮಸ್ಯೆ, ಕುತ್ತಿಗೆ ನೋವು, ಹಾಗೆ ಮೊಬೈಲ್‌ನಿಂದ ಬಿಡುಗಡೆಯಾಗುವಂತಹ ಎಲೆಕ್ಟ್ರೋಮ್ಯಾಗ್‌ನೆಟಿಕ್‌ ರೆಡಿಯೇಶನಿಂದಾಗಿ ಮೆದುಳಿನ ಕ್ಯಾನ್ಸರ್‌ ಹೀಗೆ ಹತ್ತು ಹಲವಾರು ಸಮಸ್ಯೆಗಳು ಮೊಬೈಲ್‌ನಿಂದ ಆಗುತ್ತಿದೆ.
ಇಷ್ಟೆಲ್ಲಾ ಸಮಸ್ಯೆಗಳಾಗುತ್ತಿದ್ದರು ಮೊಬೈಲನ್ನು ಬಳಸುವುದನ್ನು ನಿಲ್ಲಿಸುವುದಕ್ಕೆ ಸಾಧ್ಯವಾ? ಇಲ್ಲಾ. ತಂತ್ರಜ್ಙಾನ ಬದಲಾದಂತೆ ನಾವು ಬದಲಾಗಬೇಕಾಗುತ್ತದೆ. ಹಾಗಂತ ಮೊಬೈಲ್‌ ಬಳಸುವುದು ತಪ್ಪು ಎಂದಲ್ಲಾ. ಒಂದು ಗಾದೆ ಮಾತಿದೆ ಅತಿಯಾದರೆ ಅಮೃತವು ವಿಷ ಎಂದು. ಯಾವುದನ್ನು ಎಷ್ಟು ಮಿತಿಯಲ್ಲಿ ಬಳಸಬೇಕೊ ಅಷ್ಟೇ ಮಿತಿಯಲ್ಲಿ ಬಳಸಬೇಕು. ಮಿತಿಯನ್ನು ಮೀರಿ ಬಳಸಿದಾಗ ಅದು ವಿಷವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗೆ ಒಂದು ಸಣ್ಣ ಬೆಂಕಿ ಕಡ್ಡಿಯಿಂದ ದೀಪವನ್ನು ಹಚ್ಚಬಹುದು ಅದೇ ಕಡ್ಡಿಯಿಂದ ಮನೆಯನ್ನು ಸುಡಬಹುದು. ಏನು ಮಾಡಬೇಕೆಂದಿರುವುದು ನಮ್ಮಲೇ ಇದೆ. ಆದ್ದರಿಂದ ನಾವು ಮೊಬೈಲ್‌ನ್ನು ಯಾವ ರೀತಿಯಲ್ಲಿ ಹೇಗೆ ಬಳಸುತ್ತೇವೆ ಎಂಬುದರ ಮೇಲೆ ಅದರ ಒಳಿತು ಕೆಡುಕು ನಿರ್ಧಾರವಾಗುತ್ತದೆ. ಒಳ್ಳೆಯದು ಮತ್ತು ಕೆಟ್ಟದರಲ್ಲಿ ಯಾವುದನ್ನು ತೆಗೆದುಕೊಳ್ಳಬೇಕು ಎಂಬ ಆಯ್ಕೆ ಇರುವುದು ನಮ್ಮ ಕೈಯಲ್ಲಿ……..

ಮೇಘಾ
ಆಲ್ಮಾ ಮೀಡಿಯಾ ಸ್ಕೂಲ್‌ ವಿದ್ಯಾರ್ಥಿನಿ

Show More

Related Articles

Leave a Reply

Your email address will not be published. Required fields are marked *

Back to top button