Politics
ವಕ್ಫ್ ಬಿಲ್‌ಗೆ 91% ಭಾರತೀಯರ ಬೆಂಬಲ: ದೇಶಾದ್ಯಾಂತ ಸರ್ವೇಗೆ ಭಾರೀ ಪ್ರತಿಕ್ರಿಯೆ!
ನವದೆಹಲಿ: ಭಾರತದಲ್ಲಿ ವಕ್ಫ್ ಬಿಲ್‌ಗೆ ಸಂಬಂಧಿಸಿದ ಬೃಹತ್ ಸರ್ವೇಯ ಫಲಿತಾಂಶವು ಭಾರೀ ಗಮನ ಸೆಳೆಯುತ್ತಿದೆ. 91% ಭಾರತೀಯರು ಈ ಬಿಲ್‌ಗೆ ಪರವಾಗಿದ್ದಾರೆ ಎಂದು ಲೋಕಲ್ ಸರ್ಕಲ್ಸ್ ನಡೆಸಿದ ಸರ್ವೇ ತಿಳಿಸಿದೆ. ಮತ್ತೊಂದು ಆಶ್ಚರ್ಯಕರ ಅಂಶವೆಂದರೆ ಕೇವಲ 8% ಮಂದಿ ಮಾತ್ರ ಈ ಬಿಲ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಭಾರತದ 388 ಜಿಲ್ಲೆಗಳಲ್ಲಿನ 47,149 ಜನರನ್ನು ಒಳಗೊಂಡು ಈ ಸರ್ವೇ ನಡೆಸಲಾಗಿದೆ. ಜಂಟಿ ಸಂಸತ್ತಿನ ಸಮಿತಿಗೆ (JPC) ವರದಿ ಸಲ್ಲಿಸುವ ಮೊದಲು ಈ ಸರ್ವೇಯ ಫಲಿತಾಂಶ ಬಯಲಾಗಿದೆ. ಮುಖ್ಯವಾಗಿ, 96% ಜನರು ವಕ್ಫ್ ಬೋರ್ಡುಗಳು ಕಡ್ಡಾಯವಾಗಿ ತಮ್ಮ ಆಸ್ತಿಗಳನ್ನು ಜಿಲ್ಲಾ ಕಲೆಕ್ಟರ್‌ರ ಬಳಿ ನೋಂದಣಿ ಮಾಡಿಸಬೇಕು ಎಂಬುದನ್ನು ಬಲವಾಗಿ ಒತ್ತಾಯಿಸಿದ್ದಾರೆ.
ಈ ಬೃಹತ್ ಸರ್ವೇಯು ದೇಶಾದ್ಯಾಂತ ವಕ್ಫ್ ಬಿಲ್‌ಗಾಗಿ ಬಲವಾದ ಬೆಂಬಲವಿದೆ ಎಂದು ತೋರಿಸುತ್ತಿದ್ದು, ಸಮ್ಮತಿಸಿದವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇರುವುದು ಚರ್ಚೆಗೆ ಕಾರಣವಾಗಿದೆ.