Blog
‘ಸ್ವಾಮಿತ್ವ’ ಯೋಜನೆಯಡಿ ಗ್ರಾಮಗಳಲ್ಲಿ ಇನ್ನು ಮುಂದೆ ಆಸ್ತಿ ಸಮೀಕ್ಷೆ ಸುಲಭ.


ಗ್ರಾಮದಲ್ಲಿ ಆಸ್ತಿ ಹೊಂದಿದ ಮಾಲೀಕರಿಗೆ ಹಕ್ಕು ದಾಖಲೆಯನ್ನು ನೀಡುವ ಸ್ವಾಮಿತ್ವ ಯೋಜನೆಯನ್ನು ಪಂಚಾಯತ್ ರಾಜ್ ಸಚಿವಾಲಯ ಜಾರಿಗೆ ತರುತ್ತಿದೆ.
ಈ ಯೋಜನೆಯು ಇತ್ತೀಚೆಗಿನ ಹೊಸ ತಂತ್ರಜ್ಞಾನವಾದ ಡ್ರೋನ್ ಸರ್ವೇ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಭೂಮಿಯನ್ನು ಗುರುತಿಸುವ ಕೆಲಸ ಮಾಡಲಿದೆ. ಇದು ಪಂಚಾಯತ್ ರಾಜ್ ಸಚಿವಾಲಯ, ರಾಜ್ಯ ಕಂದಾಯ ಇಲಾಖೆಗಳು, ರಾಜ್ಯ ಪಂಚಾಯತ್ ರಾಜ್ ಇಲಾಖೆಗಳು ಹಾಗೂ ಸರ್ವೆ ಆಫ್ ಇಂಡಿಯಾದ ಸಹಯೋಗದಿಂದ ಜರುಗುತ್ತಿದೆ.
ಈ ಯೋಜನೆಯ ಉಪಯೋಗಗಳೆಂದರೆ, ಸುಲಭವಾಗಿ ಆಸ್ತಿ ಮಾರಾಟ ಮಾಡಬಹುದು, ಸುಲಭ ಬ್ಯಾಂಕ್ ಸಾಲ ಸೌಲಭ್ಯ, ಆಸ್ತಿ ಸಂಬಂಧಿತ ವಿವಾದಗಳನ್ನು ಕಡಿಮೆ ಮಾಡುತ್ತದೆ, ಮತ್ತು ಗ್ರಾಮ ಸ್ವರಾಜ್ಯವನ್ನು ಸಾಧಿಸಲು ಸಮಗ್ರ ಗ್ರಾಮಮಟ್ಟದ ಯೋಜನೆಗಳನ್ನು ಜಾರಿಗೊಳಿಸಬಹುದು. ಗ್ರಾಮೀಣ ಭಾರತವನ್ನು ಆತ್ಮನಿರ್ಭರವ್ನಾಗಿಸಲು ಇದೊಂದು ಮೆಟ್ಟಿಲಾಗಲಿದೆ.