Blog

ಸತತವಾಗಿ ಆರನೇ ಬಾರಿಯೂ ಬದಲಾಗಲದ ರಿಪೋ ರೇಟ್.

ಭಾರತದ ಬ್ಯಾಂಕುಗಳ ಬ್ಯಾಂಕ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗುರುವಾರ 8, ಫೆಬ್ರವರಿಯಂದು ವಿತ್ತೀಯ ನೀತಿ ಸಮಿತಿಯ ಸಭೆ ನಡೆಸಿದೆ. ಈ ಸಭೆ ಸತತ ಆರನೇ ಬಾರಿಯೂ ತನ್ನ ರಿಪೋ ರೇಟನ್ನು ಬದಲಾಯಿಸದೆ 6.5% ನಲ್ಲಿಯೇ ಮುಂದುವರೆಸಿದೆ.

“ಆಹಾರ ಬೆಲೆಗಳಲ್ಲಿನ ಅನಿಶ್ಚಿತತೆಯು ಮುಖ್ಯ ಹಣದುಬ್ಬರದ ಮೇಲೆ ಪ್ರಭಾವ ಬೀರುತ್ತಿದೆ. ದೇಶೀಯ ಚಟುವಟಿಕೆಗಳಲ್ಲಿ ಆವೇಗವು ಬಲವಾಗಿ ಮುಂದುವರಿಯುತ್ತದೆ, ” ಎಂದು ಗವರ್ನರ್ ಹೇಳಿದರು.

ಈ ನಿರ್ಧಾರಕ್ಕೆ ಒಟ್ಟು ಆರು ಸದಸ್ಯರಲ್ಲಿ ಐದು ಜನ ಅಸ್ತು ಎಂದಿದ್ದಾರೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ಕುಸಿತ ಕಂಡಿದ್ದು, ಜುಲೈ 2023ಕ್ಕೆ ಅದು 7.44% ರಷ್ಟರ ಗಡಿ ತಲುಪಿತ್ತು. ಡಿಸೆಂಬರ್ 2023ರಲ್ಲಿ ಇದು 5.69% ಗೆ‌ ಬಂದು ತಲುಪಿದೆ. ಈ ಸಂಖ್ಯೆ ರಿಸರ್ವ್ ಬ್ಯಾಂಕಿನ ಪೂರ್ವ ನಿರ್ಧಾರಿತ 4-6% ಒಳಗೆ ಇರುವುದು ಸ್ವಲ್ಪ ಸಮಾಧಾನಕರ ಸಂಗತಿ.

ಕೊನೆಯ ತಿಂಗಳು ಗವರ್ನರ್ ದಾಸ್ ಅವರು ” ಮುಂದಿನ ಹಣಕಾಸು ವರ್ಷದಲ್ಲಿ ಭಾರತೀಯ ಆರ್ಥಿಕತೆಯು 7% ಬೆಳವಣಿಗೆ ದರವನ್ನು ದಾಖಲಿಸಬೇಕು, ಇದರಿಂದ ಹಣದುಬ್ಬರವು ಮತ್ತಷ್ಟು ಕಡಿಮೆಯಾಗುವ ಸಾಧ್ಯತೆಯಿದೆ.” ಎಂದಿದ್ದರು.

Show More

Leave a Reply

Your email address will not be published. Required fields are marked *

Related Articles

Back to top button