CinemaEntertainment
2024ರಲ್ಲಿ ತಾಯಿ ಆಗುತ್ತಿರುವ ಈ ನಟಿಯರು ಯಾರು?
ಭಾರತೀಯ ಚಿತ್ರರಂಗದ ಈ ತಾರಾಮಣಿಗಳು ಈ ವರ್ಷ 2024ರಲ್ಲಿ ತಾಯ್ತನಕ್ಕೆ ಕಾಲಿಡುತ್ತಿದ್ದಾರೆ. ಯಾರು ಈ ನಟಿಯರು ಹಾಗಾದರೆ?
- ಯಾಮಿ ಗೌತಮ್
ಬಾಲಿವುಡ್ ಬೆಡಗಿ ಯಾಮಿ ಗೌತಮ್ ತನ್ನ ಮುಂಬರುವ ಚಲನಚಿತ್ರ ಆರ್ಟಿಕಲ್ 370ರ ಟ್ರೈಲರ್ ಬಿಡುಗಡೆಯ ಸಮಯದಲ್ಲಿ ಅವರು ಗರ್ಭ ಧರಿಸಿದ ವಿಷಯವನ್ನು ಹಂಚಿಕೊಂಡರು. ಯಾಮಿ ಗೌತಮ್ ಅವರು ಆದಿತ್ಯ ದಾರ್ ಅವರನ್ನು 2021 ರಲ್ಲಿ ಮದುವೆಯಾಗಿದ್ದರು.
- ಅಮಲಾ ಪೌಲ್
ಹೆಬ್ಬುಲಿ ಚಿತ್ರದ ನಾಯಕ ನಟಿಯಾಗಿ ಕನ್ನಡ ಸಿನಿ ಪ್ರಿಯರ ಮನಸ್ಸನ್ನು ಸೆಳೆದ ಅಮಲಾ ಪೌಲ್ ರವರು ತಾಯಿ ಆಗುವ ಸಿಹಿ ಸುದ್ದಿಯನ್ನು ಅವರ ಪತಿಯಾದ ಜಗತ್ ದೇಸಾಯಿ ತಿಳಿಸಿದ್ದರು.
- ರಿಚಾ ಚಡ್ಡಾ
‘ಮಿರ್ಜಾಪುರ್’ ವೆಬ್ ಸೀರೀಸ್ ಮೂಲಕ ಖ್ಯಾತಿ ಪಡೆದಂತಹ ಅಲಿ ಫಜಲ್ ತಮ್ಮ ಪತ್ನಿಯಾದ ನಟಿ ರಿಚಾ ಚಡ್ಡಾ ಅವರು ತಾಯಿಯಾಗಿರುವ ಸುದ್ದಿಯನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ‘1+1=3’ ಎಂದು ಪೋಸ್ಟ್ ಮಾಡು ಮೂಲಕ ಹಂಚಿಕೊಂಡಿದ್ದರು.
- ಮಿಲನಾ ನಾಗರಾಜ್
ಕನ್ನಡ ಚಲನಚಿತ್ರರಂಗದ ಖ್ಯಾತ ಜೋಡಿಯಾದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರ ಮೊದಲ ಮಗುವಿನ ಆಗಮನವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ದಿನಗಳ ಹಿಂದೆ ಪೋಸ್ಟ್ ಮಾಡುವ ಮೂಲಕ ಹೇಳಿಕೊಂಡಿದ್ದರು.
- ಅದಿತಿ ಪ್ರಭುದೇವ
ಸ್ಯಾಂಡಲ್ವುಡ್ನ ಶಾನೇ ಟಾಪ್ ಆಗಿರುವ ನಟಿ ಆದಿತಿ ಪ್ರಭುದೇವ ಹಾಗೂ ಅವರ ಪತಿ ತಮ್ಮ ಮೊದಲ ಸಂತಾನದ ಸಿಹಿ ಸುದ್ದಿಯನ್ನು, ತಮ್ಮ ಪ್ರಿ ಪ್ರೆಗ್ನೆನ್ಸಿ ಫೋಟೋ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಾರೆ.
- ದೀಪಿಕಾ ಪಡುಕೋಣೆ
ಬಿ ಟೌನ್ ಬೆಡಗಿ ಹಾಗೂ ಹಾಲಿವುಡ್ ನಲ್ಲಿಯೂ ತಮ್ಮ ಖ್ಯಾತಿಯನ್ನು ಬೆಳಗಿದ ನಟಿ ದೀಪಿಕಾ ಪಡುಕೋಣೆಯವರು, ತಮ್ಮ ಮೊದಲ ಮಗುವನ್ನು 2024ರ ಸೆಪ್ಟೆಂಬರ್ ತಿಂಗಳಲ್ಲಿ ಹೊಂದುವುದಾಗಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ.