ಮುಂಬೈ: ನಿನ್ನೆ ಭಾರತೀಯ ಶೇರು ಮಾರುಕಟ್ಟೆ ಐತಿಹಾಸಿಕ ಓಟವನ್ನು ಖಂಡಿತ. ಆದರೆ ಇಂದು ಈ ಹಸಿರು ಊಟಕ್ಕೆ ಕಡಿವಾಣ ಬಿದ್ದಿದೆ. ಇಂದು ಸೆನ್ಸೆಕ್ಸ್ ಬರೋಬ್ಬರಿ 1148.12 ಅಂಕಗಳ ಕುಸಿತ ಕಂಡಿದೆ. ಹಾಗೆ ನಿಫ್ಟಿ ಕೂಡ 353.80 ಅಂಕಗಳ ಕುಸಿತ ಕಂಡಿದೆ.
ಹಾಗಾದ್ರೆ ಶೇರು ಮಾರುಕಟ್ಟೆ ಚುನಾವಣೆಯ ಫಲಿತಾಂಶದ ಭವಿಷ್ಯವನ್ನು ಕಂಡುಹಿಡಿತ್ತಾ?
“ಈ ರೀತಿಯ ವಿದ್ಯಮಾನಗಳು ಶೇರು ಮಾರುಕಟ್ಟೆಯಲ್ಲಿ ವರ್ಷಕ್ಕೆ ಮೂರು ನಾಲ್ಕು ಬಾರಿ ಸಂಭವಿಸುತ್ತದೆ. ಚುನಾವಣೆ ಫಲಿತಾಂಶಕ್ಕೂ ಹಾಗೂ ಶೇರು ಮಾರುಕಟ್ಟೆಯ ಹೇಳಿದಕ್ಕೂ ಯಾವುದೇ ಸಂಬಂಧವಿಲ್ಲ.” ಎಂದು ಅಮಿತ್ ಷಾ ಹೇಳಿದ್ದರು.
ಆದರೆ ಚುನಾವಣಾ ಫಲಿತಾಂಶದ ಕೆಲವೊಂದು ಅಂಶಗಳು ಶೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಲಿದೆ. ಯಾಕೆಂದರೆ ಯಾವಾಗ ದೇಶದಲ್ಲಿ ಒಂದು ಸದೃಢವಾದ ಬಹುಮತ ಹೊಂದಿದ ಪಕ್ಷ ಅಧಿಕಾರಕ್ಕೆ ಬರುತ್ತದೆಯೋ, ಅಂತಹ ಸಂದರ್ಭದಲ್ಲಿ ಶೇರು ಮಾರುಕಟ್ಟೆ ಏರಿಕೆ ಕಾಣುವುದನ್ನು ಸಾಮಾನ್ಯವಾಗಿ ಕಾಣಬಹುದು. ಹಾಗಾಗಿ ಹಿತ ಕಡೆ ಭಾರತೀಯ ಜನತಾ ಪಕ್ಷ ಪೂರ್ಣ ಬಹುಮತವನ್ನು ಪಡೆಯದೇ ಇರುವುದು ಶೇರು ಮಾರುಕಟ್ಟೆಯ ಇಂದಿನ ಇಳಿತಕ್ಕೆ ಕಾರಣವಾಗಿರಬಹುದಾ?