ಮುಂಬೈ: ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ದಿನವಾದ ಜೂನ್ 06ರಂದು ಭಾರತೀಯ ಶೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ ಜೋರಾಗಿಯೇ ಇತ್ತು. ಇದರ ಮೇಲೆ ಚುನಾವಣಾ ಫಲಿತಾಂಶ ಪ್ರಭಾವ ಬೀರಿದೆ ಎಂದು ಹಲವರು ಊಹಿಸಿದ್ದಾರೆ. ಒಂದು ಸದೃಢ ಸರ್ಕಾರ ಬಾರದೇ ಇರುವುದು ಇದಕ್ಕೆ ಕಾರಣ ಎನ್ನಲಾಗಿದೆ.
ಇಂದು ಜೂನ್ 06ರಂದು ಅಲ್ಪ ಚೇತರಿಕೆ ಕಂಡಿದೆ ಶೇರು ಮಾರುಕಟ್ಟೆ. ಸೆನ್ಸೆಕ್ಸ್ 470.94 ಅಂಕಗಳನ್ನು ಗಳಿಸಿದೆ, ಹಾಗೆಯೇ ನಿಫ್ಟಿ 84.10 ಅಂಕಗಳು ಏರಿಕೆ ಆಗಿದೆ.
ಸೋಮವಾರ ಜೂನ್ 04ರಂದು ಶೇರು ಮಾರುಕಟ್ಟೆ ಐತಿಹಾಸಿಕ ಓಟವನ್ನು ಕಂಡಿತ್ತು. ಸೆನ್ಸೆಕ್ಸ್ 1894.7 ಹಾಗೂ ನಿಫ್ಟಿ 611.20 ಅಂಕ ಗಳಿಸಿತ್ತು.