CinemaEntertainmentPolitics

‘ಹಮಾರೆ ಬಾರಾಹ್’ ಚಿತ್ರ ಕರ್ನಾಟಕದಲ್ಲಿ ಬ್ಯಾನ್.

ಬೆಂಗಳೂರು: ಅನ್ನು ಕಪೂರ್, ಅಶ್ವಿನಿ ಕಲ್ಸೇಕರ್ ನಟನೆಯ, ಕಮಲ್ ಚಂದ್ರ ಅವರ ನಿರ್ದೇಶನದ ‘ಹಮಾರೆ ಬಾರಾಹ್’ ಚಲನಚಿತ್ರವನ್ನು ಕರ್ನಾಟಕ ಸರ್ಕಾರ ಬ್ಯಾನ್ ಮಾಡಿದೆ. ಈ ಚಿತ್ರ ಬಿಡುಗಡೆಯಾದರೆ ರಾಜ್ಯದಲ್ಲಿ ಕೋಮುಗಲಭೆ ಉಂಟಾಗುವ ಸಾಧ್ಯತೆಗಳಿವೆ ಎಂದು ಕಾರಣ ನೀಡಿದೆ.

ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು, ಈಗ ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಹೋರಾಟಕ್ಕೆ ಇಳಿಯುತ್ತಿದ್ದ ಸಂಘಟನೆಗಳು ಎಲ್ಲಿ ಹೋಗಿವೆ ಎಂದು ಪ್ರಶ್ನಿಸಿದ್ದಾರೆ.

ಈ ಚಿತ್ರವು ಮುಸ್ಲಿಂ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ತೆರೆಯ ಮೇಲೆ ತರುವ ಧೈರ್ಯ ಮಾಡಿದ್ದಾರೆ ನಿರ್ದೇಶಕ ಕಮಲ್ ಚಂದ್ರ. ರಾಜ್ಯ ಕಾಂಗ್ರೆಸ್ ಸರ್ಕಾರ ಬಿಬಿಸಿ ಡಾಕ್ಯುಮೆಂಟರಿಗಳಿಗೆ ಬೆಂಬಲ ನೀಡಲು ಮುಂದೆ ಬರುತ್ತದೆ. ಆದರೆ ಈ ಮಣ್ಣಿನ ಮಹಿಳೆಯರ ಮೇಲೆ ಆಗುತ್ತಿರುವ ಬಲಾತ್ಕಾರವನ್ನು ಹೇಳಲು ಹೊರಟರೆ ಬ್ಯಾನ ಮಾಡುತ್ತದೆ ಎಂದು ಜನರು ಟೀಕಿಸುತ್ತಿದ್ದಾರೆ.

Show More

Leave a Reply

Your email address will not be published. Required fields are marked *

Related Articles

Back to top button