India
ವೈಷ್ಣೋದೇವಿ ಯಾತ್ರಿಗಳನ್ನು ಕೊಂದ ಭಯೋತ್ಪಾದಕರು.
ಜಮ್ಮು: ಭಾರತದ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಇರುವ ವೈಷ್ಣೋದೇವಿ ದೇವಾಲಯಕ್ಕೆ ತೆರಳುತ್ತಿದ್ದ, ಯಾತ್ರಿಗಳನ್ನು ಒಳಗೊಂಡಿದ್ದ ಬಸ್ ಮೇಲೆ ಲಷ್ಕರ್-ಎ-ತೈಬಾ ಸಂಘಟನೆಯ ಭಯೋತ್ಪಾದಕರು ಗುಂಡಿನ ಮಳೆ ಸುರಿಸಿದ್ದಾರೆ.
ಒಟ್ಟು ಸುಮಾರು 43 ಜನಗಳನ್ನು ಒಳಗೊಂಡಿದ್ದ ಬಸ್ಸಿನಲ್ಲಿ, 11 ಜನ ಮೃತಪಟ್ಟಿದ್ದಾರೆ ಹಾಗೂ 33 ಜನ ಗುಂಡಿನ ದಾಳಿಗೆ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಇಲಾಖೆಯು ಮಾಹಿತಿ ನೀಡಿದೆ. ಏಕಾಏಕಿ ಗುಂಡಿನ ದಾಳಿಯಿಂದ ನಿಯಂತ್ರಣ ತಪ್ಪಿದ ಚಾಲಕ ಬಸ್ಸನ್ನು ಕಿರಿದಾದ ಕಂದರಕ್ಕೆ ಬೀಳಿಸಿದ್ದಾನೆ.
ಈ ಘಟನೆಯ ಕುರಿತು ಮಾಹಿತಿ ಪಡೆದಿರುವ ಪ್ರಧಾನಿ ನರೇಂದ್ರ ಮೋದಿಯವರು ಗಾಯಾಳುಗಳಿಗೆ ಅತ್ಯುತ್ತಮವಾದ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹಾಗೆಯೇ ಈ ಕೃತ್ಯವನ್ನು ಕೈಗೊಂಡ ಭಯೋತ್ಪಾದಕ ಗುಂಪಿಗಾಗಿ ಭಾರತೀಯ ಸೈನ್ಯ ಜಮ್ಮುವಿನ ಮೂಲೆ ಮೂಲೆಯನ್ನೂ ಬಿಡದೆ ಹುಡುಕುತ್ತಿದ್ದಾರೆ.