ಕೊಲೆ ಪ್ರಕರಣದಲ್ಲಿ ದಾಸ ಅಂದರ್.
ಬೆಂಗಳೂರು: ಸದಾ ವಿವಾದಗಳ ನಡುವೆಯೇ ಇರುವ ನಟ ದರ್ಶನ್ ಈಗ ತಮ್ಮ ಜೀವನದಲ್ಲಿಯೇ ಅತ್ಯಂತ ದೊಡ್ಡ ವಿವಾದಕ್ಕೆ ಗುರಿಯಾಗಿದ್ದಾರೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಕೊಲೆಯ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಮೈಸೂರು ಪೊಲೀಸರು ಇಂದು ಬಂಧಿಸಿದ್ದಾರೆ. ಕೊಲೆಯಾದ ರೇಣುಕಾಸ್ವಾಮಿಯವರು ಪವಿತ್ರ ಗೌಡ ಅವರ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲವಾಗಿ ಸಂದೇಶಗಳನ್ನು ಕಳುಹಿಸಿದ್ದರು ಎಂಬ ಮಾಹಿತಿ ತಿಳಿದುಬಂದಿದೆ.
ದರ್ಶನ್ ಅವರನ್ನು ಮೈಸೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಅವರು ಹೇಳಿದ್ದಾರೆ. ಅವರನ್ನು ಬೆಂಗಳೂರಿಗೆ ಕರೆತರಲಾಗುತ್ತಿದೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.
ನಟ ದರ್ಶನ್ ಅವರ ಆಪ್ತ ಸ್ನೇಹಿತೆ ಆದಂತಹ ಪವಿತ್ರ ಗೌಡ ಅವರಿಗೆ ಅಶ್ಲೀಲ ಸಂದೇಶಗಳನ್ನು ರೇಣುಕಾ ಸ್ವಾಮಿ ಈ ಹಿಂದೆ ಕಳುಹಿಸಿದ್ದರು ಎನ್ನಲಾಗಿದೆ. ದರ್ಶನವರ ಅಣತಿಯಂತೆ ರೇಣುಕಾ ಸ್ವಾಮಿಯವರನ್ನು ಅಪಹರಿಸಿ ಒಂದು ಶೆಡ್ನಲ್ಲಿ ಕೂಡು ಹಾಕಿದ್ದರು ಎನ್ನಲಾಗಿದೆ. ತದನಂತರ ಸ್ವಾಮಿ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. ಮಾರಣಾಂತಿಕ ಹಲ್ಲೆಗಳಿಂದ ರೇಣುಕಾ ಸ್ವಾಮಿಯವರು ಸಾವನಪ್ಪಿದ್ದಾರೆ. ತದನಂತರ ಮೃತ ದೇಹವನ್ನು ಕಾಮಾಕ್ಷಿಪಾಳ್ಯ ಠಾಣೆಯ ವ್ಯಾಪ್ತಿಯಲ್ಲಿ ಬರುವಂತಹ ಬ್ರಿಡ್ಜ್ ನಲ್ಲಿ ಎಸೆದಿದ್ದಾರೆ ಎನ್ನಲಾಗುತ್ತಿದೆ. ಇದರ ಕುರಿತು ಇನ್ನಷ್ಟು ಮಾಹಿತಿಗಳು ಮುಂದೆ ಬರಬೇಕಾಗಿದೆ.