ದರ್ಶನ್ ಬಗ್ಗೆ ನಟ ಚೇತನ್ ಅಹಿಂಸಾ ಹೇಳಿದ್ದೇನು?
ಬೆಂಗಳೂರು: ನಟ ದರ್ಶನ್ ಬಂಧನದ ಕುರಿತು ಸಾಮಾಜಿಕ ಹೋರಾಟಗಾರ ಹಾಗೂ ನಟ ಆಗಿರುವ ಚೇತನ್ ಅಹಿಂಸ ಅವರು ಪ್ರತಿಕ್ರಿಯೆ ನೀಡಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಕುರಿತಂತೆ ಮಾತನಾಡಿದ ಚೇತನ್ ಅವರು ದರ್ಶನ್ ಅವರಿಗೆ, “ನಿಜ ಜೀವನದ ಖಳನಾಯಕರನ್ನು ಸೃಷ್ಟಿಸಿದವರು ನಾವು ಒಂದು ಸಮಾಜವಾಗಿ ತಪ್ಪಿತಸ್ಥರು.” ಎಂದು ಹೇಳಿದ್ದಾರೆ.
“ನಟ ದರ್ಶನ್ ಮತ್ತು ಆತನ ಸಹಚರರ ವಿರುದ್ಧ ಕೊಲೆ ಆರೋಪಗಳು ಗಂಭೀರವಾಗಿವೆ. ನಮ್ಮ ರಾಜ್ಯದ ಪೊಲೀಸರು ಅದಕ್ಕೆ ಅನುಗುಣವಾಗಿ ತನಿಖೆ ನಡೆಸುತ್ತಾರೆ ಎಂದು ನಾನು ನಂಬುತ್ತೇನೆ”. ಎಂದು ತಮ್ಮ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಅವರ ಆಪ್ತ ಸ್ನೇಹಿತೆ ಪವಿತ್ರ ಗೌಡ ಸೇರಿ ಒಟ್ಟು 13 ಆರೋಪಿಗಳು ಬಂಧನಕ್ಕೆ ಒಳಗಾಗಿದ್ದಾರೆ. ಪವಿತ್ರ ಗೌಡ ಅವರನ್ನು ನಿಮಾನ್ಸ್ ಬಳಿ ಇರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ. ಹಾಗೆ ದರ್ಶನ್ ಹಾಗೂ ಇನ್ನಿತರ ಆರೋಪಿಗಳನ್ನು ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ.