Politics
ಮೆಲೋಡಿ ಆದ ಮೆಲೋನಿ ಹಾಗೂ ಮೋದಿ.
ರೋಮ್: ಯುರೋಪ್ ಖಂಡದ ಅತ್ಯಂತ ಹಿರಿದಾದ ಇತಿಹಾಸ ಉಳ್ಳ ಇಟಲಿ ದೇಶ 2024ರ ಜಿ7 ಸಮಾವೇಶದ ಆತಿಥ್ಯವನ್ನು ಹೊಂದಿದೆ. ಈ ಸಮಾವೇಶದಲ್ಲಿ ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಕೂಡ ಕೂಡಿಕೊಂಡಿದ್ದಾರೆ. ಮೋದಿಯವರನ್ನು ಸ್ವಾಗತಿಸಲು ಸ್ವತಃ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಬಂದಿದ್ದರು.
ಈ ಹಿಂದೆ ಇವರಿಬ್ಬರ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ಮೆಲೋಡಿ ಎಂದು ಹರಿದಾಡಿತ್ತು. ಇಟಲಿ ಹಾಗೂ ಭಾರತದ ಆಳವಾದ ಸಂಬಂಧ ಐತಿಹಾಸಿಕವಾಗಿದೆ. ಪ್ರಾಚೀನ ಕಾಲದಿಂದಲೂ ಭಾರತ ಹಾಗೂ ರೋಮ್ ತಮ್ಮ ವ್ಯಾಪಾರ ಸಂಬಂಧ ಅಷ್ಟೇ ಅಲ್ಲದೆ ವೈವಾಹಿಕ ಸಂಬಂಧಕ್ಕೂ ಕೂಡ ಸಾಕ್ಷಿಯಾಗಿದೆ.
ಜಿ7 ದೇಶಗಳು ಎಂದರೆ ಕೆನಡಾ, ಜರ್ಮನಿ, ಇಟಲಿ, ಜಪಾನ್, ದ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಹಾಗೂ ದ ಯುನೈಟೆಡ್ ಕಿಂಗ್ಡಮ್ ದೇಶಗಳನ್ನು ಒಳಗೊಂಡ ಸಂಘವಾಗಿದೆ. ಈ ಹಿಂದೆ ರಷ್ಯಾ ಕೂಡ ಈ ಗುಂಪಿನ ಸದಸ್ಯ ರಾಷ್ಟ್ರವಾಗಿತ್ತು. ಆದರೆ ಕ್ರೀಮಿಯಾ ಮೇಲಿನ ದಾಳಿಯಿಂದ ರಷ್ಯಾ ತನ್ನ ಸದಸ್ಯತ್ವವನ್ನು ಕಳೆದುಕೊಂಡಿತು.