Politics
ಪೋಪ್‌ರನ್ನು ಅಪ್ಪಿದ ಮೋದಿ.
ರೋಮ್: ಜಿ7 ಸಮಾವೇಶದಲ್ಲಿ ಭಾಗವಹಿಸಿರುವ ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು, ಕ್ರಿಶ್ಚಿಯನ್ ಧರ್ಮದ ಧರ್ಮಗುರುಗಳಾದ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದರು.
ತಮ್ಮ ಎಕ್ಸ್ ಖಾತೆಯಲ್ಲಿ ಈ ಕುರಿತು ಪೋಟೋ ಹಂಚಿಕೊಂಡಿರುವ ಮೋದಿಯವರು, ತಾವು ಪೋಪ್ ಅವರನ್ನು ಅಪ್ಪಿಕೊಂಡ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದರಿಂದ ಭಾರತವು ಸರ್ವ ಧರ್ಮವನ್ನು ಒಪ್ಪಿಕೊಳ್ಳುತ್ತದೆ ಎಂಬ ಸಂದೇಶ ನರೇಂದ್ರ ಮೋದಿಯವರು ನೀಡಿದ್ದಾರೆ. ಈ ಸಂದರ್ಭದಲ್ಲಿ ಪೋಪ್ ಅವರನ್ನು ಮೋದಿಯವರು ಭಾರತಕ್ಕೆ ಆಹ್ವಾನಿಸಿದ್ದಾರೆ.