Politics

ಓಂ ಬಿರ್ಲಾ ಮತ್ತೊಮ್ಮೆ ಸ್ಪೀಕರ್.

ನವದೆಹಲಿ: 18ನೇ ಲೋಕಸಭೆ ತನ್ನ ಸ್ಪೀಕರ್ ಆಗಿ ಮತ್ತೊಮ್ಮೆ ಓಂ ಬಿರ್ಲಾ ಅವರನ್ನು ಪಡೆದಿದೆ. ಸಭಾಧ್ಯಕ್ಷ ಸ್ಥಾನಕ್ಕಾಗಿ ಆಡಳಿತ ಪಕ್ಷ ಎನ್‌ಡಿಎ ವತಿಯಿಂದ ಓಂ ಬಿರ್ಲಾ ಅವರು ಸ್ಪರ್ಧಿಸುತ್ತಿದ್ದರೆ, ಇಂಡಿಯಾ ಮೈತ್ರಿಕೂಟದಿಂದ ಕೆ.ಸುರೇಶ್ ಅವರು ಸ್ಪರ್ಧೆಗೆ ಮುಂದಾಗಿದ್ದರು. ಆದರೆ ಓಂ ಬಿರ್ಲಾ ಅವರು ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಯನ್ನು ಸೋಲಿಸಿ ಎರಡನೇ ಅವಧಿಗೆ ಸಭಾಧ್ಯಕ್ಷ ಸ್ಥಾನವನ್ನು ಹೊಂದಿದರು.

ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ವಿರೋಧ ಪಕ್ಷದ ನಾಯಕರಾದ ಶ್ರೀ. ರಾಹುಲ್ ಗಾಂಧಿ ಅವರು, ಹಾಗೂ ಕಿರಣ್ ರಿಜುಜು ಅವರು ಹಸ್ತಲಾಘವ ನೀಡಿ ಅಭಿನಂದನೆಗಳನ್ನು ಸಲ್ಲಿಸಿದರು.

“ಸದನದ ಪರವಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ಅಮೃತ ಕಾಲದ ಸಮಯದಲ್ಲಿ ನೀವು ಎರಡನೇ ಬಾರಿಗೆ ಈ ಹುದ್ದೆಯಲ್ಲಿ ಕುಳಿತುಕೊಳ್ಳುವುದು ದೊಡ್ಡ ಜವಾಬ್ದಾರಿಯಾಗಿದೆ. ನಿಮ್ಮ ಅನುಭವದೊಂದಿಗೆ, ಮುಂದಿನ 5 ವರ್ಷಗಳವರೆಗೆ ನೀವು ನಮಗೆ ಮಾರ್ಗದರ್ಶನ ನೀಡುತ್ತೀರಿ ಎಂದು ನಾವು ಭಾವಿಸುತ್ತೇವೆ. ನಿಮ್ಮ ಮುಖದಲ್ಲಿನ ಸಿಹಿ ನಗು ಇಡೀ ಸದನವನ್ನು ಸಂತೋಷವಾಗಿರಿಸುತ್ತದೆ,’’ ಎಂದು ಪ್ರಧಾನಿ ಹೇಳಿದರು.

Show More

Leave a Reply

Your email address will not be published. Required fields are marked *

Related Articles

Back to top button