Sports
ರೋಹಿತ್ ಹಾಗೂ ವಿರಾಟ್ ದಾರಿ ಹಿಡಿದರಾ ಜಡೇಜಾ?!
ನವದೆಹಲಿ: ವಿಶ್ವಕಪ್ ಗೆದ್ದ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ದಿಗ್ಗಜರುಗಳು ಒಬ್ಬರ ನಂತರ ಒಬ್ಬರಂತೆ ಟಿ-20 ಪಂದ್ಯಾವಳಿಗಳಿಗೆ ನಿವೃತ್ತಿ ಘೋಷಿಸುತ್ತಿದ್ದಾರೆ. ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ಈಗಾಗಲೇ ತಮ್ಮ ನಿವೃತ್ತಿ ನಿರ್ಧಾರವನ್ನು ಹೇಳಿಕೊಂಡಿದ್ದಾರೆ.
ಇವರ ಹಾದಿಯನ್ನೇ ತುಳಿದ ಆಲ್ ರೌಂಡರ್ ರವೀಂದ್ರ ಜಡೇಜಾ. ಟಿ-20 ಪಂದ್ಯಾವಳಿಗಳಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ. ವಿಶ್ವಕಪ್ ನಲ್ಲಿ ಅಂತಹ ಹೇಳುವಂತಹ ಪ್ರದರ್ಶನ ಜಡೇಜಾ ಅವರಿಂದ ಬಂದಿರಲಿಲ್ಲ. ಆದರೆ ಜಡೇಜಾ ಅವರು ಕಳೆದ ದಶಕದಿಂದ ಕ್ರಿಕೆಟಿನ ಮೂರೂ ಆವೃತ್ತಿಗಳಲ್ಲಿ ಅತ್ಯುತ್ತಮ ಆಲ್ ರೌಂಡರ್ ಎಂಬ ಹೆಸರನ್ನು ಪಡೆದಿದ್ದಾರೆ.
ಜಡೇಜಾ ಅವರು ತಮ್ಮ ಮೊದಲ ಟಿ-20 ಪಂದ್ಯವನ್ನು ಶ್ರೀಲಂಕಾ ವಿರುದ್ಧ 2009ರಲ್ಲಿ ಆಡಿದ್ದರು. ಇಲ್ಲಿಯವರೆಗೆ ಇವರು 74 ಪಂದ್ಯಗಳಲ್ಲಿ, 41 ಇನ್ನಿಂಗ್ಸ್ ಗಳನ್ನು ಆಡಿ, 515 ರನ್ ಗಳನ್ನು ಕೂಡಿ ಹಾಕಿದ್ದಾರೆ. 15 ವರ್ಷದ ಟಿ-20 ಜೀವನದಲ್ಲಿ ಜಡೇಜಾ ಅವರು 54 ವಿಕೆಟ್ ಗಳನ್ನು ಪಡೆದಿದ್ದಾರೆ.