ಬೆಂಗಳೂರು: ದೇಶದಲ್ಲಿ ಹೊಸ ಅಪರಾಧ ಕಾನೂನು ಜಾರಿಯಾದ ಬೆನ್ನಲ್ಲೇ, ರಾಜ್ಯದಲ್ಲಿ ಸಹ ನೂತನ ಕಾನೂನು ಯೋಜನೆಗಳನ್ನು ತರಲು, ರಾಜ್ಯ ಕಾನೂನು ಸಚಿವರಾದ ಕೆ.ಎಚ್. ಪಾಟೀಲ್ ಮುಂದಾಗಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಕೇಂದ್ರದ ನೂತನ ಅಪರಾಧ ಕಾನೂನು ಹಾಗೂ ರಾಜ್ಯ ಹೊರಡಿಸಲಿರುವ ಕಾನೂನಿಗೂ ಹೊಂದಾಣಿಕೆ ಆಗಿದೆ ಇರಬಹುದೇ? ಎಂಬ ಅನುಮಾನಗಳು ಹುಟ್ಟಿಕೊಂಡಿತ್ತು. ಈ ಬೆಳವಣಿಗೆಯ ಕುರಿತು ಇಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
“ನಮ್ಮ ಕಾನೂನು ಸಚಿವರು ರಾಜ್ಯದಲ್ಲಿ ಕೆಲವು ಹೊಸ ನೀತಿಗಳನ್ನು ತರಲು ಪ್ರಯತ್ನಿಸುತ್ತಿದ್ದಾರೆ, ಇದರಲ್ಲಿ ಸಾಮಾನ್ಯ ಜನರಿಗೆ ನ್ಯಾಯವು ಸುಲಭವಾಗಿ ದೊರೆಯುತ್ತದೆ … ಭಾರತ ಸರ್ಕಾರವು ಜಾರಿಗೆ ತಂದಿರುವ ಹೊಸ ಕಾನೂನುಗಳೊಂದಿಗೆ ಯಾವುದೇ ವಿರೋಧಾಭಾಸಗಳಿಲ್ಲ. ಕಾರ್ಯವಿಧಾನವಾಗಿ, ಅದು ಕಾನೂನು ಕಾರ್ಯವಿಧಾನದ ವಿಷಯದಲ್ಲಿ ಸಾಮಾನ್ಯ ವ್ಯಕ್ತಿಗೆ ಸ್ವಲ್ಪ ಬೆಂಬಲವನ್ನು ನಿಭಾಯಿಸಲು ಸುಲಭವಾಗಲಿದೆ…” ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.