Sports
ಐಸಿಸಿಯ ತಿಂಗಳ ಪ್ರಶಸ್ತಿ ಬಾಚಿಕೊಂಡ ಬೂಮ್ರಾ ಹಾಗೂ ಮಂದಾನ.
![](https://akeynews.com/wp-content/uploads/2024/07/14-780x470.jpg)
ನವದೆಹಲಿ: ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಐಸಿಸಿಯು ಪ್ರತಿ ತಿಂಗಳು ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಶ್ರೇಷ್ಠ ಆಟಗಾರರನ್ನು ಗುರುತಿಸಿ ಪ್ರಶಸ್ತಿ ನೀಡುತ್ತದೆ. ಜೂನ್ ತಿಂಗಳ ಪ್ರಶಸ್ತಿಯನ್ನು ಪುರುಷರ ವಿಭಾಗದಲ್ಲಿ ಭಾರತದ ವೇಗಿ ಜಸ್ಪ್ರೀತ್ ಬೂಮ್ರಾ ಅವರು ಪಡೆದರೆ, ಮಹಿಳಾ ವಿಭಾಗದಲ್ಲಿ ಭಾರತ ಮಹಿಳಾ ತಂಡದ ಆಟಗಾರ್ತಿ ಸ್ಮೃತಿ ಮಂದಾನ ಅವರು ಪಡೆದಿದ್ದಾರೆ.
ಬೂಮ್ರಾ ಅವರು ಭಾರತ ತಂಡದ ನಾಯಕ ರೋಹಿತ್ ಶರ್ಮ ಹಾಗೂ ಅಪಘಾನಿಸ್ತಾನ್ ಆರಂಭಿಕ ಬ್ಯಾಟರ್ ರೆಹಮಾನುಲ್ಲಾ ಗುರ್ಬಾಜ್ ಅವರನ್ನು ಹಿಂದಿಕ್ಕಿ ಈ ಪ್ರಶಸ್ತಿಯನ್ನು ಪಡೆದಿದ್ದಾರೆ. 2024ರ ಟಿ-20 ವಿಶ್ವ ಕಪ್ ಪಂದ್ಯಾವಳಿಯಲ್ಲಿ ಬೂಮ್ರಾ ಅವರ ಅತ್ಯುತ್ತಮ ಪ್ರದರ್ಶನಕ್ಕಾಗಿ ಈ ಗೌರವ ಒಲಿದು ಬಂದಿದೆ ಎನ್ನಲಾಗಿದೆ.