ಅಪರ್ಣಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಮ್ಮ ಮೆಟ್ರೋ.
ಬೆಂಗಳೂರು: ನಮ್ಮ ಮೆಟ್ರೋದ ಪ್ರಕಟಣೆಗಳ ಹಿಂದೆ ಇದ್ದ ಧ್ವನಿ ಅಪರ್ಣಾ ಅವರದ್ದು. 2011 ರಿಂದ ಇವರ ದ್ವನಿ ಬೆಂಗಳೂರಿನ ಮೆಟ್ರೋ ರೈಲುಗಳಲ್ಲಿ ಹಾಗೂ ಮೆಟ್ರೋ ನಿಲ್ದಾಣಗಳಲ್ಲಿ ಗುನುಗುತ್ತಿದೆ. ಅವರ ಅಗಲಿಕೆಗೆ ಇಂದು ನಮ್ಮ ಮೆಟ್ರೋ ತಮ್ಮ ಎಕ್ಸ್ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ.
“ಅದೆಷ್ಟೋ ಮೆಟ್ರೋ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಹೆಗ್ಗಳಿಕೆ ಇವರದ್ದು. ಇವರಿಗೆ ಭಾಷೆಯ ಮೇಲಿನ ಹಿಡಿತ ಮತ್ತು ಉಚ್ಛಾರಣೆ ಎರಡೂ ಕರಗತವಾಗಿತ್ತು. ಇವರ ಧ್ವನಿ ನಮ್ಮ ಮೆಟ್ರೋವಿನಲ್ಲಿ ಎಂದೆಂದಿಗೂ ಜೀವಂತ. ಮುಂದಿನ ಬಾರಿ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವಾಗ ಕಣ್ಣು ಮುಚ್ಚಿ ಅವರ ಸ್ಪಷ್ಟ ಕನ್ನಡದ ಸವಿ ಸವಿಯಿರಿ.
ಅವರಿಗೆ ದೇವರ ವರದಾನದ ಧ್ವನಿ ಇತ್ತು. ನಮ್ಮ ಮೆಟ್ರೋ ಹಾಗೂ ತಮ್ಮ ಮಾಸದ ದನಿಗೂ ಇರುವ ನಂಟು ಎಂದಿಗೂ ಕಳಚದು. ದೇವರು ಅವರ ಆತ್ಮಕ್ಕೆ ಶಾಂತಿ ಮತ್ತು ಅವರ ಕುಟುಂಬಕ್ಕೆ ಅವರ ಅಗಲಿಕೆಯನ್ನು ಭರಿಸುವ ಶಕ್ತಿ ನೀಡಲಿ.” ಎಂದು ಅಪರ್ಣ ಅವರಿಗೆ ಶ್ರದ್ಧಾಂಜಲಿಯನ್ನು ನಮ್ಮ ಮೆಟ್ರೋ ಸಲ್ಲಿಸಿದೆ.
ಅಪರ್ಣ ಅವರ ಅಚ್ಚ ಕನ್ನಡ, ಪರಿಶುದ್ಧವಾದ ಧ್ವನಿ, ಭಾವ ತುಂಬಿದ ಶಬ್ದ ಪಠಣ, ಜನರನ್ನು ಮಂತ್ರಮುಗ್ಧಗೊಳಿಸುತ್ತಿತ್ತು. ಇವರ ಶರೀರ ಇಂದು ಇರದೆ ಇದ್ದರೂ ಸಹ ಇವರ ದ್ವನಿ ಸಾದಾ ಇರಲಿದೆ.