ಮುಂದಿನ 5 ದಿನಗಳ ಮಳೆ ಮುನ್ಸೂಚನೆ; ಆರೆಂಜ್ ಅಲರ್ಟ್‌ಗೆ ಬಂದಿಳಿದ ಕರಾವಳಿ ಜಿಲ್ಲೆಗಳು.
ಉತ್ತರ ಕನ್ನಡ: ಈ ವರ್ಷದ ಮುಂಗಾರು ರಾಜ್ಯದಲ್ಲಿ ಜಲಾಶಯಗಳನ್ನು ಭರ್ತಿ ಮಾಡುವ ಜೊತೆಗೆ, ಕರಾವಳಿ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತ ಮಾಡಿದೆ. ಗುಡ್ಡ ಕುಸಿತ ಹಾಗೂ ಪ್ರವಾಸಿಗಳಿಗೆ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳು ಸಾಕ್ಷಿಯಾಗಿವೆ. ಭಾರತದ ಹವಾಮಾನ ಇಲಾಖೆ ಮುಂದಿನ 5 ದಿನಗಳ ಮಳೆ ಮುನ್ಸೂಚನೆಯನ್ನು ನೀಡಿದೆ. ಇಷ್ಟು ದಿನ ರೆಡ್ ಅಲರ್ಟ್ ಘೋಷಣೆ ಅಡಿಯಲ್ಲಿ ಇದ್ದ ಕರಾವಳಿ ಜಿಲ್ಲೆಗಳು ಈಗ ಆರೆಂಜ್ ಅಲರ್ಟ್‌ಗೆ ಬಂದಿಳಿದಿದೆ.
ರಾಜ್ಯದ ಕರಾವಳಿ ಜಿಲ್ಲೆಗಳಿಗೆ ಇಂದು ಜೋರಾದ ಗಾಳಿಯೊಂದಿಗೆ ಅತ್ಯಧಿಕ ಮಳೆ, ಹಾಗೂ ಕರಾವಳಿ ಜಿಲ್ಲೆಗಳಿಗೆ ನಾಳೆ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಇಂದು ಮತ್ತು ನಾಳೆ ಜೋರಾದ ಗಾಳಿಯೊಂದಿಗೆ ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. IMD ಯಿಂದ ಆರೆಂಜ್ ಅಲರ್ಟ್ ನೀಡಲಾಗಿದೆ, ಜುಲೈ 21 ರಿಂದ 23 ರವರೆಗೆ ಜೋರಾದ ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಉತ್ತರ ಒಳನಾಡು ಜಿಲ್ಲೆಗಳಿಗೆ, ಜುಲೈ 19 ರಿಂದ 23 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದೆ.
ರಾಜ್ಯದ ಜನರು, ಅದರಲ್ಲೂ ಕರಾವಳಿ ಜಿಲ್ಲೆಗಳ ಜನರು ಆದಷ್ಟು ಸುರಕ್ಷಿತವಾಗಿರಬೇಕು. ಗುಡ್ಡ ಪ್ರದೇಶ ಹಾಗೂ ನದಿ ತಪ್ಪಲಿನಲ್ಲಿ ವಾಸಿಸುವ ಜನರು, ಸರ್ಕಾರದ ಗಂಜಿ ಕೇಂದ್ರ ಸೇರುವುದು ಉತ್ತಮ.