ಕರಾವಳಿಯಲ್ಲಿ ನಾಳೆ ಹೈಅಲರ್ಟ್! ವರುಣನ ಇನ್ನೊಂದು ಮುಖ ಅನಾವರಣವಾಗಲಿದೆಯೇ?!
ಉತ್ತರ ಕನ್ನಡ: ರಾಜ್ಯದಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ವರ್ಷಧಾರೆ ಜನಜೀವನವನ್ನು ಅಸ್ತವ್ಯಸ್ತ ಮಾಡಿದೆ. ಕರಾವಳಿ ಜಿಲ್ಲೆಗಳು ಈ ಭಾರೀ ಮಳೆಗೆ ಅಸಹಾಯಕ ಸ್ಥಿತಿಯಲ್ಲಿ ನಿಂತಿವೆ. ಈಗಾಗಲೇ ಆತಂಕದಲ್ಲಿ ಇರುವ ಕರಾವಳಿ ಜನರಿಗೆ ಇನ್ನೊಂದು ಶಾಕಿಂಗ್ ಸುದ್ದಿ ಹೊರಬಂದಿದೆ. ಜುಲೈ 20 ರಂದು ಕರಾವಳಿ ಸೇರಿ ಮಲೆನಾಡು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಆಗಿದೆ. ನಾಳೆ ವರಣನ ಇನ್ನೊಂದು ಮುಖ ಅನಾವರಣ ಆಗಲಿದೆ.
“ಜುಲೈ 20 ರಂದು- ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು & ಶಿವಮೊಗ್ಗ ಜಿಲ್ಲೆಗಳಿಗೆ IMD ಯಿಂದ ರೆಡ್ಅಲರ್ಟ್ ನೀಡಲಾಗಿದೆ. ಹಾಸನ ಜಿಲ್ಲೆಗೆ IMD ಯಿಂದ ಆರೆಂಜ್ಅಲರ್ಟ್ ನೀಡಲಾಗಿದೆ.” ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ತಿಳಿಸಿದೆ.
ಮಳೆಯ ರೌದ್ರಾವತಾರಕ್ಕೆ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಹಾಗೂ ಕೊಡಗು ಜಿಲ್ಲೆಗಳಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಆಸ್ತಿ ಹಾನಿ, ಪ್ರಾಣಹಾನಿ ಸಂಭವಿಸಿದೆ. ಕಾಡು ಪ್ರಾಣಿಗಳು ಹಾಗೂ ಸಾಕು ಪ್ರಾಣಿಗಳು ಪ್ರವಾಹದ ಪಾಲಾದ ಘಟನೆ ಕೂಡ ಸಂಭವಿಸಿದೆ. ಆಯಾ ಜಿಲ್ಲೆಯ ಜಿಲ್ಲಾಡಳಿತ ಈ ಕುರಿತು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ.