Bengaluru
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಮಾಡಿದ ಮುಖ್ಯಮಂತ್ರಿ.
ಬೆಂಗಳೂರು: ಈ ವರ್ಷದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಸಕ್ಕರೆ ನಾಡು ಮಂಡ್ಯದಲ್ಲಿ ಜರುಗಲಿದೆ. ಕನ್ನಡ ಭಾಷೆಯನ್ನು ಅತಿ ಹೆಚ್ಚು ಮಾತನಾಡುವ ಮಂಡ್ಯ ಜಿಲ್ಲೆಗೆ ಈ ಸಾಹಿತ್ಯ ಸಮ್ಮೇಳನ ಒಂದು ಗರಿಯೇ ಸರಿ. ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಡುಗಡೆ ಮಾಡಿದರು.
ಈ ವರ್ಷ ಡಿಸೆಂಬರ್ 22 ರಿಂದ 22ರ ವರೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಬಾರಿಯ ಲಾಂಛನದಲ್ಲಿ ಮಂಡ್ಯ ಜಿಲ್ಲೆಯ ಸಂಸ್ಕೃತಿ ಮತ್ತು ವೈಶಿಷ್ಟ್ಯತೆ ತುಂಬಿಕೊಂಡಿದೆ. ‘ಸಕ್ಕರೆ ನಾಡು ಅಕ್ಕರೆಯ ಬಿಡು’ ಎಂಬ ಧ್ಯೇಯ ವಾಕ್ಯದೊಂದಿಗೆ ಲಾಂಛನ ರೂಪುಗೊಂಡಿದೆ. ಈ ಲಾಂಛನವು ಮಂಡ್ಯದ ಅಸ್ಮಿತೆ, ಮಂಡ್ಯದ ಹೆಗ್ಗುರುತುಗಳಾದ ಕಾವೇರಿ ನದಿ, ಕಬ್ಬು, ಬಿಸಿ ಬೆಲ್ಲ, ಹಸಿ ಭತ್ತ, ಹಾಗೂ ನೇಗಿಲ ಯೋಗಿ ರೈತನನ್ನು ಒಳಗೊಂಡಿದೆ.