ಪಾಕಿಸ್ತಾನವಾಗುತ್ತಿರುವ ಬಾಂಗ್ಲಾದೇಶ: ಪದತ್ಯಾಗದ ಹಿಂದಿದ್ದಾರೆಯೇ ಸೇನಾ ಮುಖ್ಯಸ್ಥ?
ಢಾಕಾ: ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಸ್ಥಾನವನ್ನು ವಹಿಸಿಕೊಂಡ ಒಂದು ತಿಂಗಳ ನಂತರ, ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರು ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ್ದಾರೆ. ಈಗ ಈ ಸುದ್ದಿ ಜನರ ಹುಬ್ಬು ಏರಿಸುವಂತೆ ಮಾಡಿದೆ. ಪಾಕಿಸ್ತಾನದಂತೆ ಬಾಂಗ್ಲಾದೇಶ ಕೂಡ ಸೇನೆಯ ಹಿಡಿತಕ್ಕೆ ಒಳಪಡಲಿದೆಯೆ ಎಂಬ ಆತಂಕ ಎಲ್ಲೆಡೆ ಮನೆಮಾಡಿದೆ. ಹಸೀನಾ ಅವರ ರಾಜೀನಾಮೆಯ ಹಿಂದೆ, ಬಾಂಗ್ಲಾದೇಶದ ಹಿಂಸಾಚಾರದ ಹಿಂದೆ, ಪ್ರಧಾನಿ ನಿವಾಸದ ಮೇಲೆ ಪ್ರತಿಭಟನಾಕಾರರ ದಾಳಿ ಹೀಗೆ ಹತ್ತು ಹಲವು ಘಟನೆಗಳು ಸೈನ್ಯದತ್ತ ಬೆರಳು ಮಾಡಿ ತೋರಿಸುತ್ತಿದೆ.
ಬಾಂಗ್ಲಾದೇಶದ ಸೇನಾ ಮುಖ್ಯಸ್ಥರಾಗಿ ಕೇವಲ ಒಂದು ತಿಂಗಳ ನಂತರ, ಜನರಲ್ ವೇಕರ್-ಉಸ್-ಝಮಾನ್ ಅವರು ದೇಶದಿಂದ ಪಲಾಯನ ಮಾಡಿದ ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆಯನ್ನು ಕುದ್ದು ಸೋಮವಾರ ಘೋಷಿಸುವ ಮೂಲಕ ಗಮನ ಸೆಳೆದಿದ್ದಾರೆ. ತಮ್ಮ ಭಾಷಣದಲ್ಲಿ, ಜಮಾನ್ ಅವರು ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚಿಸಿದ ನಂತರ, ಮಧ್ಯಂತರ ಸರ್ಕಾರವನ್ನು ಸ್ಥಾಪಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಸೈನ್ಯವು ನೇರ ಪಾತ್ರವನ್ನು ಹೊಂದಿದೆಯೇ ಎಂಬುದು ಅಸ್ಪಷ್ಟವಾಗಿರುವಾಗ, ನಾವು ಈಗ ಮಧ್ಯಂತರ ಸರ್ಕಾರದ ರಚನೆಯ ಬಗ್ಗೆ ಚರ್ಚಿಸಲು, ಮಧ್ಯಂತರ ಸರ್ಕಾರವನ್ನು ಸ್ಥಾಪಿಸಲು ಮತ್ತು ರಾಷ್ಟ್ರವನ್ನು ನಿರ್ವಹಿಸಲು ದೇಶದ ಅಧ್ಯಕ್ಷರನ್ನು ಭೇಟಿಯಾಗುತ್ತೇವೆ ಎಂದು ಜಮಾನ್ ಉಲ್ಲೇಖಿಸಿದ್ದಾರೆ. ಒಟ್ಟಿನಲ್ಲಿ ನೆರೆಯ ದೇಶ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಭಾರತಕ್ಕೆ ತಟ್ಟಿದೆ ಇರದು, ಈ ಬಗ್ಗೆ ಭಾರತ ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು.