CinemaEntertainment

ಗಿನ್ನಿಸ್ ದಾಖಲೆ: 14 ಸಾವಿರ ಬುಡಕಟ್ಟು ಮಕ್ಕಳೊಂದಿಗೆ ರಾಷ್ಟ್ರಗೀತೆ ರೆಕಾರ್ಡ್‌ ಮಾಡಿದ ಗ್ರ್ಯಾಮಿ ವಿಜೇತ.

ಬೆಂಗಳೂರು: ಲೀಲಾ ಪ್ಯಾಲೆಸ್‌ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳು ತಮ್ಮ 2024ರ ದೊಡ್ಡ ಮೈಲಿಗಲ್ಲನ್ನು ಆಚರಿಸಿವೆ. ಟ್ರಾವೆಲ್ + ಲೀಸರ್ USA ಯ ಓದುಗರಿಂದ ಲೀಲಾ ಪ್ಯಾಲೆಸ್ 2024 ರ ಟಾಪ್ 3 ವಿಶ್ವದ ಅತ್ಯುತ್ತಮ ಹೋಟೆಲ್ ಬ್ರ್ಯಾಂಡ್‌ಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ. 2020 ರಿಂದ ಈ ಗೌರವವನ್ನು ಲೀಲಾ ಪ್ಯಾಲೆಸ್‌ ಸತತ ನಾಲ್ಕು ವರ್ಷಗಳ ಕಾಲ ಗಳಿಸುತ್ತಿದೆ. ಬೆಂಗಳೂರಿನ ಲೀಲಾ ಪ್ಯಾಲೇಸ್‌ ಹೊಟೇಲ್‌ ಏಷ್ಯಾದಲ್ಲಿಯೇ 4ನೇ ಸ್ಥಾನದಲ್ಲಿದ್ದು, ದೇಶದಲ್ಲಿ ನಂಬರ್‌ 1 ಸ್ಥಾನದಲ್ಲಿದೆ.

ಈ ಸಾಧನೆಯನ್ನು ಸೆಲೆಬ್ರೇಟ್‌ ಮಾಡುವ ಉದ್ದೇಶದಿಂದ ಲೀಲಾ ಪ್ಯಾಲೇಸ್‌ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳು 3 ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತ, ವಿಶ್ವಸಂಸ್ಥೆಯ ಸದ್ಭಾವನಾ ರಾಯಭಾರಿ ರಿಕಿ ಕೇಜ್‌ ಜತೆ ಕೈ ಜೋಡಿಸಿವೆ. ಈ ಸಂಧರ್ಭದಲ್ಲಿ, ಕೇಜ್‌ ಅವರು 14 ಸಾವಿರ ಬುಡಕಟ್ಟು ಮಕ್ಕಳೊಂದಿಗೆ ನಮ್ಮ ಹೆಮ್ಮೆಯ ಭಾರತದ ರಾಷ್ಟ್ರಗೀತೆಯನ್ನು ರೆಕಾರ್ಡ್‌ ಮಾಡಿ ಗಿನ್ನೆಸ್‌ ದಾಖಲೆಯನ್ನೂ ಬರೆದಿದ್ದಾರೆ.

ಸಂಗೀತದ ತಾರೆಗಳು ಮತ್ತು ಗಿನ್ನೆಸ್ ದಾಖಲೆ:

ಈ ವಿಶಿಷ್ಟ ಪ್ರಯತ್ನದಲ್ಲಿ, ರಿಕಿ ಕೇಜ್‌ ಜತೆಗೆ ಬಾನ್ಸುರಿ ಮಾಂತ್ರಿಕ ಪಂಡಿತ್ ಹರಿಪ್ರಸಾದ್ ಚೌರಾಸಿಯಾ, ಬಾನ್ಸುರಿ ಮೆಸ್ಟ್ರೋ ರಾಕೇಶ್ ಚೌರಾಸಿಯಾ, ಸಂತೂರ್ ಮೇಸ್ಟ್ರೋ ರಾಹುಲ್ ಶರ್ಮಾ, ಸರೋದ್ ಮಾಸ್ಟ್ರೋಸ್ ಅಮಾನ್ ಮತ್ತು ಅಯಾನ್, ನಾದಸ್ವರಂ ಮೇಸ್ಟ್ರೋಗಳು ಶೇಕ್ ಮಹಬೂಬ್ ಸುಭಾನಿ ಮತ್ತು ಕಲೀಶಾಬಿ ಮಹಬೂಬ್, ವೀಣಾ ಮೇಸ್ಟ್ರೋ ಡಾ. ಜಯಂತಿ ಕುಮರೇಶ್, ಮತ್ತು ಕರ್ನಾಟಿಕ್ ತಾಳವಾದ್ಯ ತಾರೆ ಗಿರಿಧರ್ ಉಡುಪ ಇಂತಹ ದಿಗ್ಗಜರು ಭಾಗವಹಿಸಿದ್ದಾರೆ.

ರಿಕಿ ಕೇಜ್‌ರ ಸಂದೇಶ:

ರಿಕಿ ಕೇಜ್‌ ತಮ್ಮ ಸಂತಸವನ್ನು ಹಂಚಿಕೊಂಡು, “ಲೀಲಾ ಪ್ಯಾಲೆಸ್‌ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳೊಂದಿಗೆ ಸಹಯೋಗದಿಂದ ಈ ವಿಶೇಷ ಕ್ಷಣವನ್ನು ಹಂಚಿಕೊಳ್ಳುತ್ತಿರುವುದು ನನಗೆ ವಿಶೇಷ ಅನುಭವ. ದಿ ಲೀಲಾ ಭಾರತದ ಶ್ರೀಮಂತ ಪರಂಪರೆ, ವೈವಿಧ್ಯಮಯ ಸಂಸ್ಕೃತಿ, ಮತ್ತು ದೇಶದ ಅಪರೂಪದ ಕೊಡುಗೆಗಳನ್ನು ಪ್ರಪಂಚಕ್ಕೆ ತೋರಿಸುವಲ್ಲಿ ಮುಂಚೂಣಿಯಲ್ಲಿದೆ. ಭಾರತದ ಏಕತೆ ಮತ್ತು ವೈವಿಧ್ಯತೆಯನ್ನು ಜಗತ್ತಿಗೆ ನೀಡಿರುವ ಈ ಐಕಾನಿಕ್ ಬ್ರ್ಯಾಂಡ್‌ನೊಂದಿಗೆ ಕೈ ಜೋಡಿಸುವುದು ನನಗೆ ಗೌರವವಾಗಿದೆ,” ಎಂದು ಅವರು ಹೇಳಿದರು.

ಸಿಇಒ ಅನುರಾಗ್ ಭಟ್ನಾಗರ್‌ ಅವರ ಹೇಳಿಕೆ:

ಲೀಲಾ ಪ್ಯಾಲೇಸಸ್‌, ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುರಾಗ್ ಭಟ್ನಾಗರ್‌ ಮಾತನಾಡಿ, “ದಿ ಲೀಲಾದಲ್ಲಿ, ನಾವು ಜಾಗತಿಕ ಪ್ರಯಾಣಿಕರಿಗೆ ಭಾರತೀಯ ಆತಿಥ್ಯದ ಮೌಲ್ಯವನ್ನು ಮನವರಿಕೆ ಮಾಡಿಸುತ್ತಿದ್ದೇವೆ. ರಿಕಿ ಕೇಜ್ ಅವರೊಂದಿಗೆ ಕೈ ಜೋಡಿಸಿದ ನಮ್ಮ ಈ ಪ್ರಯತ್ನದಿಂದ ನಾವು ನಮ್ಮ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತಿದ್ದೇವೆ,” ಎಂದು ಹೇಳಿದರು.

Show More

Leave a Reply

Your email address will not be published. Required fields are marked *

Related Articles

Back to top button