ಕೈ ನಾಯಕನಿಂದ ರಾಜ್ಯಪಾಲರಿಗೆ ‘ಬಾಂಗ್ಲಾದೇಶ’ ಮಾದರಿಯ ಎಚ್ಚರಿಕೆ..!!
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ನಾಯಕ ಇವಾನ್ ಡಿಸೋಜಾ, ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರನ್ನು ಬೆದರಿಕೆ ಹಾಕಿರುವುದು ವಿವಾದಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧದ ತನಿಖಾ ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಡಿಸೋಜಾ ಆಗ್ರಹಿಸಿದ್ದಾರೆ, ಇಲ್ಲದಿದ್ದರೆ ‘ಬಾಂಗ್ಲಾದೇಶ’ ಗತಿ ಎದುರಾಗಬಹುದು ಎಂದು ಎಚ್ಚರಿಸಿದ್ದಾರೆ.
ಡಿಸೋಜಾ ಅವರ ಈ ಹೇಳಿಕೆ ತೀವ್ರ ವಿರೋಧಕ್ಕೆ ಕಾರಣವಾಗಿದ್ದು, ರಾಜ್ಯಪಾಲರ ವಿರುದ್ಧ ಧಿಕ್ಕಾರ ಘೋಷಣೆಗಳು ಕೇಳಿಬಂದಿವೆ. ಇಂತಹ ಹೇಳಿಕೆಗಳು ರಾಜಕೀಯ ತಳಹದಿಗೆ ತಕ್ಕದ್ದಲ್ಲ ಮತ್ತು ರಾಜ್ಯದ ಆಂತರಿಕ ಶಾಂತಿಗೆ ಧಕ್ಕೆ ಉಂಟುಮಾಡುತ್ತವೆ.
ಮಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಧರಣಿ, ಪಾದಯಾತ್ರೆ ಮತ್ತು ರ್ಯಾಲಿಗಳನ್ನು ಆಯೋಜಿಸಿದ್ದಾರೆ. ರಾಜ್ಯದ ಹಲವೆಡೆ ರಾಜ್ಯಪಾಲರ ವಿರುದ್ಧ ಘೋಷಣೆಗಳು ಜೋರಾಗಿದೆ.
ಡಿಸೋಜಾ ಅವರ ಈ ಹೇಳಿಕೆ ಭಾರತಾದಲ್ಲಿನ ರಾಜಕೀಯ ಶಿಷ್ಟಾಚಾರದ ವಿರುದ್ಧವಾಗಿದ್ದು, ಇದು ಕಾಂಗ್ರೆಸ್ ಪಕ್ಷದ ನೈತಿಕತೆಯನ್ನು ಪ್ರಶ್ನಿಸುತ್ತದೆ. ಇಂತಹ ಬೆದರಿಕೆಗಳು ಪ್ರಜಾಪ್ರಭುತ್ವದ ಮೂಲಭೂತ ತತ್ವಗಳಿಗೆ ವಿರುದ್ಧವಾಗಿವೆ ಮತ್ತು ಅವುಗಳನ್ನು ತಕ್ಷಣವೇ ಖಂಡಿಸಬೇಕು.
ರಾಜ್ಯಪಾಲರ ಕಛೇರಿ ಮುಂದೆ ಪ್ರತಿಭಟನೆ ನಡೆಸುವಂತೆ ಕರೆ ನೀಡಿರುವ ಡಿಸೋಜಾ, ತಮ್ಮ ಹೇಳಿಕೆಯೊಂದಿಗೆ ಸಾರ್ವಜನಿಕ ಮತ್ತು ರಾಜಕೀಯ ವಲಯದಲ್ಲಿ ಅಸಮಾಧಾನ ಹುಟ್ಟಿಸುತ್ತಿದ್ದಾರೆ. ಇಂತಹ ಅಪ್ರಜಾಪ್ರಭುತ್ವ ನೀತಿಗಳನ್ನು ತಕ್ಷಣವೇ ತಡೆಗಟ್ಟಬೇಕೆಂದು ಜನರು ಆಗ್ರಹಿಸಿದ್ದಾರೆ.