ಕೊಲ್ಕತ್ತಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ: “ಯಾರನ್ನು ಪ್ರಾಂಶುಪಾಲರು ರಕ್ಷಿಸುತ್ತಿದ್ದಾರೆ?” ಎಂದು ಪ್ರಶ್ನಿಸಿದ ಸಿಜೆಐ.
ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು, ಪಶ್ಚಿಮ ಬಂಗಾಳ ಸರ್ಕಾರದ ತೀರ್ಮಾನವನ್ನು ಪ್ರಶ್ನಿಸಿದ್ದಾರೆ. ಕೋಲ್ಕತ್ತಾದ ಆರ್‌ಜಿ ಕಾರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರನ್ನು ಮತ್ತೊಂದು ಕಾಲೇಜಿಗೆ ವರ್ಗಾವಣೆ ಮಾಡಿದುದರ ಹಿಂದೆ ಇರುವ ಕಾರಣವೇನು ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
“ಪ್ರಾಂಶುಪಾಲರು ಯಾರನ್ನು ರಕ್ಷಿಸುತ್ತಿದ್ದಾರೆ?” ಎಂಬ ಪ್ರಶ್ನೆಯನ್ನು ಸಿಜೆಐ ಚಂದ್ರಚೂಡ್ ಅವರ ಕೇಳಿದ್ದಾರೆ.
ಅದಲ್ಲದೆ ಎಫ್ಐಆರ್ ದಾಖಲಿಸಲು 14 ಗಂಟೆಗಳ ವಿಳಂಬದ ಕುರಿತು ಸಿಐಜಿ ಚಂದ್ರಚೂಡ್ ಅನುಮಾನ ವ್ಯಕ್ತಪಡಿಸಿದ್ದಾರೆ. “ಅವರು ಕ್ಯಾಂಪಸ್‌ಗೆ ನೇರವಾಗಿ ಬಂದು ಎಫ್ಐಆರ್ ದಾಖಲಿಸಬೇಕಾಗಿತ್ತು. ಹಾಗಾದರೆ ಯಾರನ್ನು ಅವರು ರಕ್ಷಿಸುತ್ತಿದ್ದಾರೆ?” ಎಂಬ ಪ್ರಶ್ನೆ ಎತ್ತಿದ್ದಾರೆ.
ಇನ್ನೂ ಅವರು ರಾಜೀನಾಮೆ ನೀಡಿ ಮತ್ತೊಂದು ಕಾಲೇಜಿಗೆ ನೇಮಕಗೊಂಡಿದ್ದಾರೆ ಎಂಬ ವಿಚಾರವೂ ಸಿಜೆಐ ಚಂದ್ರಚೂಡ್ ಅವರ ಗಮನಕ್ಕೆ ಬಂದಿದೆ. “ಅವರು ರಾಜೀನಾಮೆ ನೀಡಿ, ತಕ್ಷಣವೇ ಮತ್ತೊಂದು ಕಾಲೇಜಿಗೆ ವರ್ಗಾವಣೆ ಆಗುವುದು ಅಸಾಮಾನ್ಯ. ಇದು ಏಕೆ ಸಂಭವಿಸಿದೆ?” ಎಂಬ ಪ್ರಶ್ನೆಗಳನ್ನು ಅವರು ಮುಂದಿಟ್ಟಿದ್ದಾರೆ.
ಈ ವಿಚಾರವು ಪಶ್ಚಿಮ ಬಂಗಾಳದ ಸರ್ಕಾರ ಮತ್ತು ವೈದ್ಯಕೀಯ ಪ್ರಾಂಶುಪಾಲರ ನಡುವೆ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಕುತೂಹಲವನ್ನು ಹೆಚ್ಚಿಸಿದೆ.