‘ಸಂಘಟನಾ ಪರ್ವ’: ಮೋದಿ ನೇತೃತ್ವದಲ್ಲಿ ಸದಸ್ಯತ್ವ ಅಭಿಯಾನ 2024 ಪ್ರಾರಂಭ
ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ, “ಇಂದು ಎಲ್ಲಾ ಬಿಜೆಪಿ ಅಭಿಮಾನಿಗಳು ಮತ್ತು ಕಾರ್ಯಕರ್ತರಿಗೆ ಅತ್ಯಂತ ಮಹತ್ವದ ದಿನ,” ಎಂದು ಘೋಷಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ಮುಖ್ಯಸ್ಥ ಜೆ.ಪಿ. ನಡ್ಡಾ ನೇತೃತ್ವದಲ್ಲಿ ‘ಸಂಘಟನಾ ಪರ್ವ, ಸದಸ್ಯತ್ವ ಅಭಿಯಾನ 2024’ ಅನ್ನು ಇಂದು ಪ್ರಾರಂಭಿಸಲಾಗುತ್ತಿದೆ.
ಬಿಜೆಪಿ ವಿಶ್ವದ ಅತಿ ದೊಡ್ಡ ಪಕ್ಷ:
“ಬಿಜೆಪಿ ಕೇವಲ ಕಾಗದದ ಮೇಲೆ ಅಷ್ಟೇ ಅಲ್ಲದೆ, ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಅನೇಕ ಕ್ರಾಂತಿಕಾರಿ ನಿರ್ಧಾರಗಳನ್ನು ಕೈಗೊಂಡಿದೆ,” ಎಂದು ಅಮಿತ್ ಶಾ ಹೇಳಿದರು. “ಪ್ರತಿ ಕ್ಷೇತ್ರದಲ್ಲಿ ದೇಶವು ಹೊಸ ಮೈಲಿಗಲ್ಲನ್ನು ತಲುಪಿದೆ…140 ಕೋಟಿ ಜನರಿಗೆ ‘ವಿಕಸಿತ ಭಾರತ’ದ ದೃಷ್ಟಿಕೋನವನ್ನು ನೀಡಲು ಪ್ರಧಾನಿ ಮೋದಿಯವರು ಶ್ರಮಿಸುತ್ತಿದ್ದಾರೆ.” ಎಂದರು.
ಬಿಜೆಪಿಯ ಸಂಘಟನೆಗೆ ಭಾರೀ ಬೆಂಬಲ:
“ಈ ಗುರಿ ಸಾಧಿಸಲು ಬಿಜೆಪಿಯನ್ನು ಬಲಪಡಿಸುವ ಅಗತ್ಯವಿದೆ,” ಎಂದು ಶಾ ಹೇಳಿದರು. “ಬಿಜೆಪಿಯ ಎಲ್ಲಾ ಅಭಿಮಾನಿಗಳು, ದೇಶದ ಜನರು ಹಾಗೂ ಕಾರ್ಯಕರ್ತರಿಗೆ, ಮತ್ತೊಮ್ಮೆ ಬಿಜೆಪಿʼಯೊಡನೆ ಒಗ್ಗೂಡುವಂತೆ ನಾನು ಮನವಿ ಮಾಡುತ್ತೇನೆ.”
ಈ ಅಭಿಯಾನವು ಬಿಜೆಪಿಯ ಮುಂದಿನ ಯೋಜನೆಗಳನ್ನು ಉತ್ತೇಜಿಸುವುದು ಮತ್ತು ದೇಶಾದ್ಯಾಂತ ಸಂಘಟನಾತ್ಮಕ ಬೆಳವಣಿಗೆಗೆ ಉತ್ತೇಜನ ನೀಡಲಿದೆ ಎನ್ನಬಹುದು.