Sports

ಪ್ಯಾರಿಸ್ ಪ್ಯಾರಾಲಿಂಪಿಕ್ಸ್: ಮತ್ತೊಮ್ಮೆ ಚಿನ್ನ ಬಾಚಿದ ಜಾವೆಲಿನ್ ಸ್ಟಾರ್ ಸುಮಿತ್ ಅಂಟಿಲ್.

ಪ್ಯಾರಿಸ್: ಭಾರತದ ಜಾವೆಲಿನ್ ಸ್ಟಾರ್ ಸುಮಿತ್ ಅಂಟಿಲ್ ಅವರು ಪ್ಯಾರಾಲಿಂಪಿಕ್ಸ್‌ನಲ್ಲಿ ಮತ್ತೊಮ್ಮೆ ಚಿನ್ನದ ಪದಕ ಗೆದ್ದು ತಮ್ಮ ಸಾಧನೆಗೆ ಹೊಸ ಮೈಲುಗಲ್ಲನ್ನು ಬರೆದಿದ್ದಾರೆ. ಸೆಪ್ಟೆಂಬರ್ 2ರಂದು ಸೋಮವಾರ ನಡೆದ ಈ ಸ್ಪರ್ಧೆಯಲ್ಲಿ 69.11 ಮೀಟರ್ ಎಸೆಯುವ ಮೂಲಕ ತಮ್ಮ ಹೆಸರಿನಲ್ಲಿದ್ದ ಪ್ಯಾರಾಲಿಂಪಿಕ್ಸ್ ದಾಖಲೆ ತೂರಿ ಹಾಕಿದ ಸುಮಿತ್, ಮುಂದೆ 70.59 ಮೀಟರ್‌ನ ಜಾವೆಲಿನ್ ಎಸೆಯುವುದರ ಮೂಲಕ ಮತ್ತೊಮ್ಮೆ ದಾಖಲೆ ನಿರ್ಮಿಸಿದ್ದಾರೆ!

ಪದಕ ಪಯಣ:

ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ 68.55 ಮೀಟರ್ ಎಸೆದು ಚಿನ್ನದ ಪದಕ ಗೆದ್ದಿದ್ದ ಸುಮಿತ್, ಈ ಬಾರಿ ಮೊದಲ ಎಸೆಯಲ್ಲಿಯೇ 69.11 ಮೀಟರ್ ಎಸೆದು ಮೊದಲ ಸ್ಥಾನದತ್ತ ಸಾಗಿದರು. ಈ ಎಸೆತದ ನಂತರದ ಮೂರನೇ ಪ್ರಯತ್ನ 66.66 ಮೀಟರ್ ಆಗಿತ್ತು. ನಾಲ್ಕನೇ ಎಸೆತ ಫಾಲ್ಸ್ ಆಗಿದ್ದು, ಐದನೇ ಎಸೆತದಲ್ಲಿ 69.04 ಮೀಟರ್‌ ಎಸೆಯುವ ಮೂಲಕ ಚಿನ್ನದ ಪದಕ ಗೆಲ್ಲುವ ಸಾಧ್ಯತೆ ಹೆಚ್ಚಿಸಿಕೊಂಡರು.

ಸುಮಿತ್‌ನ ಅಂತಿಮ ಎಸೆತ 66.57 ಮೀಟರ್ ಇದ್ದರೂ, ಈ ಯಶಸ್ಸು ಅವರಿಗೇ ದೊರಕಿತು. ಶ್ರೀಲಂಕಾದ ದುಲನ್‌ ಕೋಡಿತುವಾಕು ಕೊನೆಯ ಹಂತಗಳಲ್ಲಿ ಸ್ಪರ್ಧೆ ನೀಡಿದರೂ, ಅವರ ಸಂಚಲನ ಯಾವುದೇ ರೀತಿಯಲ್ಲಿಯೂ ಸುಮಿತ್‌ ಅವರ ಗೆಲುವಿನ ಖ್ಯಾತಿಯನ್ನು ಕಸಿದುಕೊಳ್ಳಲು ಆಗಲಿಲ್ಲ.

ಸುಮಿತ್ ಅಂಟಿಲ್ ಸಾಧನೆ ಪ್ರೇರಣೆ:

ಪ್ಯಾರಾಲಿಂಪಿಕ್ಸ್‌ನಲ್ಲಿ ಎರಡು ಬಾರಿ ಚಿನ್ನದ ಪದಕ ಪಡೆದಿರುವ ಸುಮಿತ್ ಅಂಟಿಲ್‌ ಅವರ ಸಾಧನೆ ಇಡೀ ದೇಶಕ್ಕೆ ಹೆಮ್ಮೆಯ ಸಂಗತಿಯಾಗಿದೆ.

Show More

Leave a Reply

Your email address will not be published. Required fields are marked *

Related Articles

Back to top button