ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಚಾಲನೆ: 7 ಜಿಲ್ಲೆಗಳ ಕನಸು ನನಸು..?!
![](https://akeynews.com/wp-content/uploads/2024/09/thumbnail-for-Akey-news-Final-31-780x470.jpg)
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹುನಿರೀಕ್ಷಿತ “ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ”ಯ ಮೊದಲ ಹಂತಕ್ಕೆ ಚಾಲನೆ ನೀಡಿದ್ದು, 7 ಜಿಲ್ಲೆಗಳ ಲಕ್ಷಾಂತರ ಮನೆಗಳಿಗೆ ಶೀಘ್ರದಲ್ಲೇ ಕುಡಿಯುವ ನೀರು ತಲುಪುವುದಾಗಿ ಘೋಷಿಸಿದ್ದಾರೆ. ಈ ಯೋಜನೆ ಎರಡು ಹಂತಗಳಲ್ಲಿ ಜಾರಿಯಾಗುತ್ತಿದ್ದು, 2027ರೊಳಗೆ ಎರಡನೇ ಹಂತ ಪೂರ್ಣಗೊಳ್ಳಲಿದೆ.
ಹಂತ-1ಗೆ ಚಾಲನೆ:
ಪ್ರಸಕ್ತ ಮೊದಲ ಹಂತವನ್ನು ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, “2014ರಲ್ಲಿ ನಾನು ಈ ಯೋಜನೆಗೆ ಭೂಮಿಪೂಜೆ ನೇರವೇರಿಸಿದ್ದೆ, ಈಗ ಮೊದಲ ಹಂತ ಉದ್ಘಾಟನೆ ಮಾಡಿದ್ದೇನೆ. ಎರಡನೇ ಹಂತವೂ ಪೂರ್ಣಗೊಂಡು ಜನರಿಗೆ ಕುಡಿಯುವ ನೀರು ಒದಗಿಸುವ ಭರವಸೆ ಇದೆ,” ಎಂದು ಹೇಳಿದರು.
ಸುಳ್ಳು ಹಾವಳಿಗೆ ಸ್ಪಷ್ಟ ಪ್ರತಿಕ್ರಿಯೆ:
ಮುಖ್ಯಮಂತ್ರಿಗಳು, “ಯೋಜನೆಯ ಸತ್ಯತೆಯನ್ನು ಕಣ್ಣೆದುರಿಗೆ ನೋಡಿ ನಂಬುವ ಬದಲು, ಸುಳ್ಳು ಹಾವಳಿ ಹರಡುವವರ ಮಾತುಗಳನ್ನು ಕೇಳಬೇಡಿ,” ಎಂದು ಜನರಿಗೆ ಎಚ್ಚರಿಕೆ ನೀಡಿದ್ದು, ಯೋಜನೆಯ ಯಶಸ್ಸು ಶತಸಿದ್ಧ ಎಂದು ಭರವಸೆ ನೀಡಿದ್ದಾರೆ.
ಹಸಿರು ಪ್ರತಿಜ್ಞೆ:
ರೈತರಿಗೆ ತೊಂದರೆ ನೀಡುವ ಅರಣ್ಯಾಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಸಿಎಂ ಸ್ಪಷ್ಟನೆ ನೀಡಿದ್ದಾರೆ. “ಕೆರೆಗಳನ್ನು ತುಂಬಿಸಿ, ಎಲ್ಲರಿಗೂ ಕುಡಿಯುವ ನೀರನ್ನು ಒದಗಿಸುವುದೇ ನಮ್ಮ ಗುರಿ,” ಎಂದು ಹೇಳಿದ್ದಾರೆ.
ಈ ಯೋಜನೆ ರಾಜ್ಯದ 7 ಜಿಲ್ಲೆಗಳ ಜನತೆಗೆ ದೊಡ್ಡ ಮಟ್ಟದ ಪ್ರಯೋಜನವನ್ನು ನೀಡಲಿದ್ದು, ಹತ್ತಾರು ಕೆರೆಗಳನ್ನು ತುಂಬಿಸುವ ಮೂಲಕ ನೀರಿನ ಸಮಸ್ಯೆಗೆ ಪರಿಹಾರ ನೀಡಲಿದೆ.