Bengaluru
ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷೆ ಮತ್ತೆ ಮುಂದೂಡಿಕೆ: ಆಕಾಂಕ್ಷಿಗಳು ಇನ್ನೆಷ್ಟು ಕಾಯಬೇಕು?!
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಆಯೋಜಿಸಿದ್ದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) 402 ಹುದ್ದೆಗಳ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸೆಪ್ಟೆಂಬರ್ 22 ರಂದು ನಡೆಸಬೇಕಾಗಿತ್ತು. ಆದರೆ, ದಿನಾಂಕ 28ಕ್ಕೆ ಮುಂದೂಡಿದ್ದ ಬಳಿಕ, ಯುಪಿಎಸ್‌ಸಿ ಪರೀಕ್ಷೆ ಕೂಡಾ ಆ ದಿನವೇ ಆಗಿದ್ದ ಕಾರಣ ಆಕಾಂಕ್ಷಿಗಳ ಮನವಿ ಮೇರೆಗೆ ಮತ್ತೊಮ್ಮೆ ಮುಂದೂಡಲಾಗಿದೆ.
ರಾಜ್ಯದ ಗೃಹ ಸಚಿವರಾದ ಜಿ. ಪರಮೇಶ್ವರ್ ಅವರು, ಈ ಪರೀಕ್ಷೆಯ ನೂತನ ದಿನಾಂಕವನ್ನು ಒಂದೆರಡು ದಿನಗಳಲ್ಲಿ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತೀಚಿನ ದಿನಾಂಕ ಬದಲಾವಣೆಗಳಿಂದಾಗಿ ಅಭ್ಯರ್ಥಿಗಳಲ್ಲಿ ನಿರೀಕ್ಷೆಯ ಮಟ್ಟ ಹೆಚ್ಚುತ್ತಿದ್ದು, ಪರೀಕ್ಷಾ ದಿನಾಂಕದ ಅಧಿಕೃತ ಘೋಷಣೆಗೆ ಪ್ರತಿಯೊಬ್ಬರೂ ಕಾದಿದ್ದಾರೆ. ಇಷ್ಟೇ ಅಲ್ಲದೇ, ಈ ಬದಲಾವಣೆಗಳಿಂದಾಗಿ ಹಲವರಲ್ಲಿ ತೀವ್ರ ಕುತೂಹಲ ಉಂಟಾಗಿದೆ.
ಇದೀಗ ಪಿಎಸ್‌ಐ ಅಭ್ಯರ್ಥಿಗಳ ಮುಂದಿನ ಪ್ರಶ್ನೆ, ಹೊಸ ದಿನಾಂಕ ಯಾವಾಗ ಅನಾವರಣಗೊಳ್ಳಲಿದೆ? ಎಂಬುದು.