CinemaEntertainment

ಅನು ಪ್ರಭಾಕರ್ ಅಭಿನಯದ ‘ಹಗ್ಗ’ ಚಿತ್ರಕ್ಕೆ ಭರ್ಜರಿ ನಿರೀಕ್ಷೆ!

ಬೆಂಗಳೂರು: 25 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಮನೆಮಾತಾದ ಅನು ಪ್ರಭಾಕರ್, ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಹಗ್ಗ’ ಚಿತ್ರವು ಈ ವಾರದ ಸೆಪ್ಟೆಂಬರ್ 20ರಂದು ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಅನು ಅವರ ನೈಜ್ಯ ಅಭಿನಯ ಹಾಗೂ ಕಥೆಯ ವಿಭಿನ್ನತೆಯಿಂದಲೇ ಭಾರಿ ಕುತೂಹಲ ಮೂಡಿಸಿದೆ.

‘ಹಗ್ಗ’ ಚಿತ್ರದ ಟ್ರೇಲರ್ ಬಿಡುಗಡೆಯ ದಿನದಂದು, ಅನು ಅವರ 25 ವರ್ಷದ ಚಿತ್ರರಂಗದ ಪಯಣವನ್ನು ಚಿತ್ರತಂಡ ಸಂಭ್ರಮಿಸಿದ್ದು, ಕೇಕ್ ಕಟ್ ಮಾಡುವ ಮೂಲಕ ಅದ್ಧೂರಿ ಆಚರಣೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ, ಹರ್ಷಿಕಾ ಪೂಣಚ್ಛ, ಗಾಯತ್ರಿ ಪ್ರಭಾಕರ್ ಮತ್ತು ರಘು ಮುಖರ್ಜಿ ಮೊದಲಾದವರು ಹಾಜರಿದ್ದರು.

ಚಿತ್ರದ ನಿರ್ದೇಶಕ ಅವಿನಾಶ್ ಅವರ ಪ್ರಥಮ ನಿರ್ದೇಶನದ ‘ಹಗ್ಗ’ ಚಿತ್ರವು ಹಾರರ್ ಫ್ಯಾಂಟಸಿ ಆಕ್ಷನ್ ಥ್ರಿಲ್ಲರ್ ಆಗಿದ್ದು, ಹಗ್ಗವನ್ನು ಆಯುಧವನ್ನಾಗಿ ಬಳಸಿಕೊಂಡ ಕಥಾವಸ್ತು ಹೊಂದಿದೆ. “ಈ ಚಿತ್ರದಲ್ಲಿ ಅನು ಅವರು ದ್ವಿತೀಯಾರ್ಧವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ,” ಎಂದು ನಿರ್ಮಾಪಕ ರಾಜ್ ಭಾರದ್ವಾಜ್ ಸಂತಸ ವ್ಯಕ್ತಪಡಿಸಿದ್ದಾರೆ.

ಅನು ಪ್ರಭಾಕರ್ ತಮ್ಮ ಅನುಭವವನ್ನು ಹಂಚಿಕೊಂಡು, “ನಾನು ಹಾರರ್ ಸಿನಿಮಾಗಳನ್ನು ಇಷ್ಟಪಡೋದಿಲ್ಲ, ಆದರೆ ನಿರ್ದೇಶಕರ ಕಥೆ ಕೇಳಿ ನಾನು ಒಪ್ಪಿಕೊಂಡೆ,” ಎಂದರು. ಹಾರರ್ ಸಿನಿಮಾದಲ್ಲಿ ನಟಿಸಿ ಅನುಭವವಿರಲಿಲ್ಲ, ಆದರೆ ಅನವರತ ಚಿತ್ರೀಕರಣ ಮತ್ತು ತಂತ್ರಜ್ಞಾನ ಸಹಕಾರದಿಂದ ಚಿತ್ರ ಯಶಸ್ವಿಯಾಗುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಈ ಹಾರರ್ ಥ್ರಿಲ್ಲರ್‍ನಲ್ಲಿ ಸಾಕಷ್ಟು ಗ್ರಾಫಿಕ್ಸ್ ಮತ್ತು ಹೈಸ್ಟೋರಿ ಇರುವುದರಿಂದ ಚಿತ್ರ ತಂತ್ರಜ್ಞಾನ ಪ್ರಿಯರಿಗೆ ಹೆಚ್ಚು ಆಕರ್ಷಣೆಯಾಗಿದೆ.

Show More

Related Articles

Leave a Reply

Your email address will not be published. Required fields are marked *

Back to top button