Politics

ಪವನ್‌ ಕಲ್ಯಾಣ್‌ Vs ಪ್ರಕಾಶ್‌ ರಾಜ್‌: ತಿರುಪತಿ ಲಡ್ಡು ವಿಷಯದಲ್ಲಿ ಯಾಕೆ ಕಿತ್ತಾಡಿಕೊಂಡರು ಈ ಇಬ್ಬರು ನಟರು?!

ಹೈದರಾಬಾದ್: ತಿರುಮಲ ತಿರುಪತಿ ದೇವಸ್ಥಾನದಲ್ಲಿ (TTD) ಪ್ರಸಾದದ ಲಡ್ಡುವಿನಲ್ಲಿ ನಕಲಿ ತುಪ್ಪ ಬಳಕೆಯ ಆರೋಪವು ದೇಶಾದ್ಯಾಂತ ಹಿಂದೂಗಳ ಕೋಪವನ್ನು ಹೆಚ್ಚಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು ಬಿರುಸಿನ ವಾಗ್ವಾದಕ್ಕೆ ತೊಡಗಿದ್ದಾರೆ. ಸೆಪ್ಟೆಂಬರ್ 20 ರಂದು, ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಜನಸೇನಾ ನಾಯಕ ಪವನ್‌ ಕಲ್ಯಾಣ್‌ ಈ ವಿವಾದದ ಬಗ್ಗೆ ಚಿಂತೆಯನ್ನು ವ್ಯಕ್ತಪಡಿಸಿದರು, ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯ ಆರೋಪದ ಬಗ್ಗೆ ಕಿಡಿಕಾರಿದರು.

ಈ ಕುರಿತಂತೆ ನಟ ಪ್ರಕಾಶ್‌ ರಾಜ್‌ ಟ್ವೀಟ್‌ ಮಾಡುವ ಮೂಲಕ ಪವನ್‌ ಕಲ್ಯಾಣ್‌ಗೆ ಕಿವಿಮಾತು ಹೇಳಿದರು: “ಈ ವಿಚಾರವನ್ನು ರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಬೇಡಿ. ಅದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಿ.” ಇದರಿಂದಾಗಿ ಇಬ್ಬರ ನಡುವಿನ ವಾಗ್ವಾದ ತೀವ್ರತೆಯನ್ನು ಪಡೆದುಕೊಂಡು, “ನಾನು ಯಾವುದೇ ಧರ್ಮವನ್ನು ನಿರ್ದಿಷ್ಟವಾಗಿ ಟೀಕಿಸಿದ್ದೇನೆಯೇ?” ಎಂದು ಪವನ್‌ ಕಲ್ಯಾಣ್ ಪ್ರಶ್ನಿಸಿದರು

ಪ್ರಕಾಶ್‌ ರಾಜ್‌ ಪ್ರಸ್ತುತ ವಿದೇಶದಲ್ಲಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದು, ತಮ್ಮ ವಿಡಿಯೋ ತುಣುಕಿನ ಮೂಲಕ ಪವನ್‌ ಕಲ್ಯಾಣ್‌ಗೆ ಪ್ರತಿಕ್ರಿಯಿಸಿದರು: “ನಾನು ನಿಮ್ಮ ಮಾಧ್ಯಮ ಸಂವಾದವನ್ನು ವೀಕ್ಷಿಸಿದ್ದೇನೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥಮಾಡಿಕೊಳ್ಳಲಾಗಿದೆ.” ಎಂದರು.

ಪವನ್‌ ಕಲ್ಯಾಣ್ ಧರ್ಮನಿರಪೇಕ್ಷತೆಯನ್ನು ದುರುಪಯೋಗ ಮಾಡಿಕೊಂಡು ಧಾರ್ಮಿಕ ವಿವಾದವನ್ನು ಹುಟ್ಟುಹಾಕುವವರ ವಿರುದ್ಧ ಕಿಡಿಕಾರಿದ್ದಾರೆ. ಸನಾತನ ಧರ್ಮವನ್ನು ಅಪವಿತ್ರ ಮಾಡುವ ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸುತ್ತಾ, ಇತರ ಧರ್ಮಗಳ ವಿರುದ್ಧ ಇದೇ ರೀತಿಯ ಟೀಕೆ ನಡೆಯಬಹುದೇ ಎಂದು ಪ್ರಶ್ನಿಸಿದ್ದಾರೆ. ಸನಾತನ ಧರ್ಮದ ರಕ್ಷಣೆಗೆ ಬೋರ್ಡ್‌ ಸ್ಥಾಪನೆ ಮಾಡುವ ಅಗತ್ಯವಿದೆ ಎಂದು ಒತ್ತಾಯಿಸಿದ್ದಾರೆ.

Show More

Leave a Reply

Your email address will not be published. Required fields are marked *

Related Articles

Back to top button