Politics
ರಾಜ್ಯ ಸರ್ಕಾರದಿಂದ ತುಪ್ಪದ ತಪಾಸಣೆ: ಆರೋಗ್ಯ ಸಚಿವರ ಹೊಸ ಆದೇಶದಲ್ಲಿ ಏನಿದೆ..?!
ಬೆಂಗಳೂರು: ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ತಕ್ಷಣದ ಕ್ರಮ ತೆಗೆದುಕೊಂಡು, ನಂದಿನಿ ಬ್ರ್ಯಾಂಡ್ ಹೊರತುಪಡಿಸಿ ಎಲ್ಲಾ ಬ್ರ್ಯಾಂಡ್ಗಳ ತುಪ್ಪದ ಮಾದರಿಗಳನ್ನು ಸಂಗ್ರಹಿಸಿ, ತಪಾಸಣೆ ನಡೆಸಲು ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
“ದೇವಸ್ಥಾನಗಳಲ್ಲಿ ಪ್ರಸಾದದ ಗುಣಮಟ್ಟ ಪರಿಶೀಲನೆ ಮಾಡುವ ಬದಲು, ಬಳಸುವ ತುಪ್ಪದ ತಪಾಸಣೆಯತ್ತ ಗಮನಹರಿಸಲು ನಾವು ಆದೇಶಿಸಿದ್ದೇವೆ,” ಎಂದು ಗುಂಡೂರಾವ್ ತಿಳಿಸಿದ್ದಾರೆ. ರಾಜ್ಯದಲ್ಲಿ ಮಾರಾಟವಾಗುತ್ತಿರುವ ಇತರ ಎಲ್ಲಾ ಬ್ರ್ಯಾಂಡ್ಗಳ ತುಪ್ಪವನ್ನು ಕಡ್ಡಾಯವಾಗಿ ಪರೀಕ್ಷಿಸಿ, ಅದರ ಗುಣಮಟ್ಟವನ್ನು ಪರಿಶೀಲಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಈ ಕ್ರಮದಿಂದ ರಾಜ್ಯದ ಆಹಾರದ ಗುಣಮಟ್ಟವನ್ನು ಸಂರಕ್ಷಿಸುವ ಸಲುವಾಗಿ ಹೊಸ ಪರೀಕ್ಷಾ ಕ್ರಮಗಳು ಜಾರಿಗೆ ಬರಲಿದೆ. ರಾಜ್ಯ ಸರ್ಕಾರದ ದಿಡೀರ್ ತಪಾಸಣಾ ಕ್ರಮದಿಂದ ಇನ್ನೂ ಎಷ್ಟು ದೊಡ್ಡ ಹಗರಣ ಹೊರಬೀಳಬಹುದು ಎಂಬುದರ ಕುರಿತ ನಿರೀಕ್ಷೆ ಜನರಲ್ಲಿ ಕುತೂಹಲ ಮೂಡಿಸಿದೆ.