CinemaEntertainment

ಜಾತಿ ಧರ್ಮದ ಭೇದ ಅಳಿಸುವ ಭಾವಪೂರ್ಣ ಗೀತೆ: ಹೂಡಿ ಚಿನ್ನಿ ಹಾಡಿಗೆ ತಲೆದೂಗಿದ ಅಭಿಮಾನಿಗಳು!

ಬೆಂಗಳೂರು: “ಜಾತಿ ಧರ್ಮದ ಜಂಜಾಟದಲ್ಲಿ ನಿನ್ನ ಬಾಳು ಕತ್ತಲು” ಎಂಬ ಅರ್ಥಗರ್ಭಿತ ಗೀತೆ ಇದೀಗ ಕಾವ್ಯ ಪ್ರೇಮಿಗಳ ಹೃದಯ ಗೆದ್ದಿದ್ದು, ಹಾಡಿನ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಜರಗಿತು. ಜನಪರ ಕೆಲಸಗಳಿಂದ ಮನೆಮಾತಾಗಿರುವ ಎಂ. ರಾಮಚಂದ್ರ (ಹೂಡಿ ಚಿನ್ನಿ) ಅವರು, ಈ ಬಾರಿ ತಮ್ಮ ಗಾಯನ ಕಲೆ ಮೂಲಕ ಜನರ ಮನಗೆದ್ದಿದ್ದಾರೆ. ಮಂಜುಕವಿ ಬರೆದಿರುವ ಈ ಗೀತೆ, ಸಾಂಪ್ರದಾಯಿಕ ವಿಭಜನೆಗಳ ನಡುವೆಯೂ ಭಾವೈಕ್ಯತೆ ಸಾರುವ ಸಂಕೇತವಾಗಿದೆ.

ಹಾಡು ಬಿಡುಗಡೆ ಸಮಾರಂಭದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ ಧರ್ಮದ ಗುರುಗಳು ಸೇರಿಕೊಂಡು ಈ ಗೀತೆಯನ್ನು ಲೋಕಾರ್ಪಣೆ ಮಾಡಿದ್ದು, ಭಾವೈಕ್ಯತೆ ಮತ್ತು ಮಾನವೀಯತೆಯ ಉದ್ದೇಶವನ್ನು ಬಲಪಡಿಸಿದೆ. ಸಾಲುಮರದ ತಿಮ್ಮಕ್ಕ ಅವರ ಪುತ್ರ ಉಮೇಶ್, ಗಾಯಕ ಮಳವಳ್ಳಿ ಮಹದೇವಸ್ವಾಮಿ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಹೂಡಿ ಚಿನ್ನಿ ಅವರ ಮಾತುಗಳು:
“ಜಾತಿ, ಧರ್ಮ ಎಲ್ಲದಕ್ಕೂ ಮೀರಿದ್ದು ಮಾನವೀಯತೆ ಇದನ್ನು ಈ ಗೀತೆಯ ಮೂಲಕ ಹಂಚಿದ್ದೇವೆ. ಬದುಕಿದ್ದಾಗ ಇತರರ ಕಷ್ಟಕ್ಕೆ ಸ್ಪಂದಿಸುವ ಶ್ರದ್ಧೆ ಬೆಳೆಸಬೇಕು. ಗೀತೆಯ ಮೂಲಕ ಎಲ್ಲರಿಗೂ ಪ್ರೇರಣೆಯಾಗೋದು ನಮ್ಮ ಆಶಯ,” ಎಂದರು.

Show More

Leave a Reply

Your email address will not be published. Required fields are marked *

Related Articles

Back to top button