ಕಾಂತಾರ ಚಾಪ್ಟರ್ 1: 2025ರ ಅಕ್ಟೋಬರ್ 2ಕ್ಕೆ ಗಾಂಧಿ ಜಯಂತಿಯಂದು ಸಿನಿಮಾ ರಿಲೀಸ್!
ಬೆಂಗಳೂರು: ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ರಿಷಬ್ ಶೆಟ್ಟಿ ಅವರ ಮಾಸ್ಟರ್ ಪೀಸ್ ಕಾಂತಾರ ಚಾಪ್ಟರ್ 1 ಗಾಂಧಿ ಜಯಂತಿ ದಿನದಂದು, 2025ರ ಅಕ್ಟೋಬರ್ 2ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ ಎಂಬ ಘೋಷಣೆಯೊಂದಿಗೆ ಕನ್ನಡ ಚಿತ್ರರಂಗ ಬೃಹತ್ ಸುದ್ದಿಯ ಕೇಂದ್ರಬಿಂದು ಆಗಿದೆ.
ಈ ಸಿನಿಮಾವನ್ನು ಹಲವಾರು ಭಾಷೆಗಳಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿ ಬೃಹತ್ ಪ್ರಮಾಣದಲ್ಲಿ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ಪ್ರೇಕ್ಷಕರಿಗೆ ಹೊಸ ಐತಿಹಾಸಿಕ ಅನುಭವವನ್ನೂ, ಅದ್ಭುತ ದೃಶ್ಯಾನುಭವವನ್ನೂ ನೀಡಲಿದ್ದೇವೆ ಎಂದು ಹೊಂಬಾಳೆ ಫಿಲಂಸ್ ಭರವಸೆ ನೀಡಿದೆ.
ಕದಂಬ ಸಾಮ್ರಾಜ್ಯದ ಇತಿಹಾಸದ ಪುಟಗಳ ಪುನಶ್ಚೇತನ:
ಈ ಸಿನಿಮಾ ಕುಂದಾಪುರದಲ್ಲಿ ಐತಿಹಾಸಿಕ ಕದಂಬ ಸಾಮ್ರಾಜ್ಯದ ಕಾಲಘಟಿಕೆಯನ್ನು ಮರುಸೃಷ್ಟಿಸಲು ಶ್ರೇಷ್ಠ ಪ್ರಯತ್ನ ಮಾಡುತ್ತಿದ್ದು, ಶೂಟಿಂಗ್ ರಿಚ್ ಲೊಕೇಶನ್ಗಳಲ್ಲಿ ನಡೆಯುತ್ತಿದೆ. ಸಿನಿಮಾ ಪ್ರೇಕ್ಷಕರನ್ನು ಶೌರ್ಯ, ಸಂಸ್ಕೃತಿ ಮತ್ತು ಪೌರಾಣಿಕ ಯುಗದ ಅದ್ಭುತ ಜಗತ್ತಿಗೆ ಕರೆದೊಯ್ಯುವ ಹಾದಿಯಲ್ಲಿದೆ.
ರಿಷಬ್ ಶೆಟ್ಟಿಯ ಸಮರ ಕಲೆಯ ತರಬೇತಿ:
ಈ ಬಾರಿಯ ರಿಷಬ್ ಶೆಟ್ಟಿಯ ಪಾತ್ರ ಚರ್ಚೆಯ ಕೇಂದ್ರಬಿಂದು ಆಗಿದ್ದು, ಪಾತ್ರಕ್ಕೆ ತಕ್ಕಂತೆ ಅವರು ಕಲರಿಪಯಟ್ಟು ಕಲೆಯ ತೀವ್ರ ತರಬೇತಿ ಪಡೆದು ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವರ ಶ್ರಮ ಸಿನಿಮಾದಲ್ಲಿ ಮಿಂಚಲಿದೆ ಎಂದು ಚಿತ್ರತಂಡ ಹೇಳಿಕೆ ನೀಡಿದೆ.
ಹೊಂಬಾಳೆ ಫಿಲಂಸ್ ಬೃಹತ್ ಬಂಡವಾಳ:
ಕಾಂತಾರ ಚಾಪ್ಟರ್ 1 ವಿಶೇಷವಾಗಿ ಗ್ರ್ಯಾಂಡ್ ಸ್ಕೇಲ್ನಲ್ಲಿ ನಿರ್ಮಾಣವಾಗಿದ್ದು, ಪ್ರೇಕ್ಷಕರಿಗೆ ಬೃಹತ್ ಪ್ರಮಾಣದ ದೃಶ್ಯಾನುಭವವನ್ನು ನೀಡಲು ಸಿದ್ಧವಾಗಿದೆ. ಇದು ಗಾಂಧಿ ಜಯಂತಿಯ ವಿಶೇಷವಾಗಲಿದ್ದು, ದೊಡ್ಡ ತೆರೆಗೆ ಏರುವ ಕ್ಷಣಕ್ಕಾಗಿ ಜನರ ಉತ್ಸಾಹ ಹೆಚ್ಚಿಸುತ್ತಿದೆ.