‘X&Y’ ಸಿನಿಮಾದಲ್ಲಿ ಜನಮನ ಗೆದ್ದ ‘ಆಂಬು ಆಟೋ’: ವಿಷಯ ತಿಳಿದ ಆಟೋ ಚಾಲಕರು ಮಾಡಿದ್ದೇನು..?!
ಬೆಂಗಳೂರು: ಕನ್ನಡ ಸಿನಿಮಾರಂಗದಲ್ಲಿ ಮತ್ತೊಂದು ಹೊಸ ಪ್ರಯೋಗ! “X&Y” ಸಿನಿಮಾ ತನ್ನ ವಿಭಿನ್ನ ಕಥಾಹಂದರದಿಂದ ಅಷ್ಟೇ ಅಲ್ಲ, ‘ಆಂಬು ಆಟೋ’ ಎಂಬ ವಿಶಿಷ್ಟ ಪಾತ್ರದಿಂದ ಕೂಡ ಸದ್ದು ಮಾಡುತ್ತಿದೆ. ಸಾಮಾನ್ಯ ಆಟೋರಿಕ್ಷಾ ಈ ಸಿನಿಮಾದಲ್ಲಿ ‘ಆಂಬುಲೆನ್ಸ್ ಆಟೋ’ ಆಗಿ ಬಡ್ತಿ ಪಡೆದು, ತನ್ನ ಆಕರ್ಷಕ ರೂಪಾಂತರದಿಂದ ಪ್ರೇಕ್ಷಕರ ಮನ ಸೆಳೆಯುತ್ತಿದೆ.
ಆಟೋ ಚಾಲಕರ ಮೆಚ್ಚುಗೆ!
ಈ “ಆಂಬು ಆಟೋ” ಬಗ್ಗೆ ತಿಳಿದ ಆಟೋ ಚಾಲಕರು ನಿರ್ದೇಶಕ ಡಿ. ಸತ್ಯಪ್ರಕಾಶ್ ಅವರನ್ನು ಭೇಟಿಯಾಗಿ, “ನಮ್ಮ ಆಟೋರಿಕ್ಷಾ ನಮ್ಮ ಮಿತ್ರ, ಈಗ ನಿಮ್ಮ ದೃಷ್ಟಿಕೋನದಿಂದ ಅದು ‘ಆಪ್ತಮಿತ್ರ’ನಾಗಿ ಬೆಳೆದು ಬಂದಿದೆ” ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಕೆಲ ಆಟೋ ಚಾಲಕರು ತಮ್ಮ ಆಟೋಗಳನ್ನು ಸಹ ‘ಆಂಬು ಆಟೋ’ಗಳನ್ನಾಗಿ ಪರಿವರ್ತಿಸಲು ಮನಸ್ಸು ಮಾಡಿರುವುದು, ಸಿನಿಮಾ ಪ್ರಭಾವವನ್ನು ತೋರಿಸುತ್ತದೆ.
ಸಮಾಜಮುಖಿ ಕಾರ್ಯಕ್ರಮಗಳು:
ಈ “ಆಂಬು ಆಟೋ” ಇತ್ತೀಚೆಗೆ ಜಯನಗರದಲ್ಲಿ ನಡೆದ ಬೆಂಗಳೂರು ಸಾರಥಿ ಸೇನೆ ಆಟೋ ಚಾಲಕರ ಸಂಘದ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರದಲ್ಲಿ ವಿಶೇಷ ಆಕರ್ಷಣೆಯಾಗಿ ಗಮನ ಸೆಳೆಯಿತು. ಆಟೋದಲ್ಲಿಯೇ ECG ತಪಾಸಣೆ ನಡೆಸಿದ ದೃಶ್ಯ, ಕಾರ್ಯಕ್ರಮದ ಹೈಲೈಟ್ ಆಗಿ, ಸಮಾಜಮುಖಿ ಚಟುವಟಿಕೆಗಳಿಗೆ ಪ್ರೇರಣೆ ನೀಡಿದೆ.
ಹೊಸ ಕಥೆಯೊಂದಿಗೆ ನಿರ್ದೇಶಕ ಡಿ. ಸತ್ಯಪ್ರಕಾಶ್:
‘X&Y’ ಚಿತ್ರವು ನಿರ್ದೇಶಕ ಸತ್ಯಪ್ರಕಾಶ್ ಅವರ ನಾಲ್ಕನೇ ಸಿನಿಮಾ. ‘ರಾಮಾ ರಾಮಾ ರೇ’, ‘ಒಂದಲ್ಲಾ ಎರಡಲ್ಲಾ’ ಮತ್ತು ‘ಮ್ಯಾನ್ ಆಫ್ ದಿ ಮ್ಯಾಚ್’ ಚಿತ್ರಗಳಿಂದಲೇ ತಮ್ಮ ಹೊಸತನದ ಛಾಪು ಮೂಡಿಸಿರುವ ಸತ್ಯಪ್ರಕಾಶ್ ಈ ಚಿತ್ರದಲ್ಲೂ ವಿಭಿನ್ನತೆಯನ್ನು ಮುಂದುವರಿಸಿದ್ದಾರೆ.
ರಿಲೀಸ್ ಡೇಟ್ಗೆ ಹೆಚ್ಚಿದ ನಿರೀಕ್ಷೆ!
ಈ ಸಿನಿಮಾ 2025ರ ಜನವರಿ ಅಥವಾ ಫೆಬ್ರವರಿನಲ್ಲಿ ತೆರೆಕಾಣಲಿದೆ. ಜನರ ಕುತೂಹಲವನ್ನು ಹೆಚ್ಚಿಸುತ್ತಿರುವ “ಆಂಬು ಆಟೋ”ದ ಕಥೆ ಸಿನಿಮಾ ನೋಡಲು ತೀವ್ರ ನಿರೀಕ್ಷೆ ಹುಟ್ಟಿಸುತ್ತದೆ.