ಗೂಗಲ್‌ಗೆ ಸವಾಲೆಸೆದ OpenAI: ChatGPT ನವೀನ ವೆಬ್ ಸರ್ಚ್ ಫೀಚರ್ ಉಚಿತ ಬಳಕೆದಾರರಿಗೆ ಲಭ್ಯ!
ಬೆಂಗಳೂರು: OpenAI ತನ್ನ ChatGPT ನ ವೆಬ್ ಸರ್ಚ್ ಫೀಚರ್ ಅನ್ನು ಇದೀಗ ಉಚಿತ ಬಳಕೆದಾರರಿಗೂ ಲಭ್ಯ ಮಾಡಿಸುವುದಾಗಿ ಘೋಷಿಸಿದೆ. ಈ ಹೊಸ ಉಪಕರಣ ಗೂಗಲ್ ಸರ್ಚ್ ಎಂಜಿನ್ ಆಧಿಪತ್ಯಕ್ಕೆ ಭಾರೀ ಸವಾಲು ಎಸೆದಿದೆ. ಈ ಹಿಂದೆ ಪೇಯಿಂಗ್ ಸಬ್ಸ್ಕ್ರೈಬರ್‌ಗಳಿಗೆ ಮಾತ್ರ ಲಭ್ಯವಾಗಿದ್ದ ಈ ಫೀಚರ್, ಈಗ ಜಗತ್ತಿನಾದ್ಯಂತ ಎಲ್ಲ ChatGPT ಬಳಕೆದಾರರಿಗೆ ರಿಯಲ್-ಟೈಮ್ ಅಂತರ್ಜಾಲ ಮಾಹಿತಿ ಒದಗಿಸುತ್ತದೆ.
ಅತಿ ಹತ್ತಿರದಿಂದ Google-ಗೆ ಪೈಪೋಟಿ:
ಈ ಹೊಸ ವೆಬ್ ಸರ್ಚ್ ಫೀಚರ್ ಬಳಸಿ ಬಳಕೆದಾರರು ತ್ವರಿತ ಮತ್ತು ನಿಖರ ಉತ್ತರಗಳು ಪಡೆಯಬಹುದು. ಇದುವರೆಗೆ AI ಚಾಟ್‌ಬಾಟ್‌ಗಳ ಹಳೆಯ ಡೇಟಾ ಸಮಸ್ಯೆಯಿಂದ ಬಳಕೆದಾರರು ಮುಜುಗರ ಅನುಭವಿಸುತ್ತಿದ್ದರು. OpenAIನ ಚೀಪ್ ಪ್ರೊಡಕ್ಟ್ ಆಫೀಸರ್ ಕೆವಿನ್ ವೇಲ್ ಈ ಘೋಷಣೆಯನ್ನು ಯೂಟ್ಯೂಬ್ ವಿಡಿಯೋ ಮೂಲಕ ತಿಳಿಸಿದ್ದು, ಫೀಚರ್ ಅನ್ನು ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾಗುತ್ತದೆ ಎಂದು ಹೇಳಿದರು.
ಶುದ್ಧ ಮತ್ತು ಜಾಹೀರಾತು ರಹಿತ ಅನುಭವ:
ChatGPT ನ ಹೊಸ ಫೀಚರ್ Google ಅಥವಾ Perplexity ಹೋಲುವ, ಆದರೆ ಜಾಹೀರಾತುಗಳ ರಹಿತ ಕ್ಲೀನ್ ಇಂಟರ್ಫೇಸ್ ಅನ್ನು ಒದಗಿಸುತ್ತದೆ. “ನಾವು ChatGPT ಅನುಭವವನ್ನು ಇನ್ನಷ್ಟು ಉತ್ತಮಗೊಳಿಸುತ್ತಿದ್ದೇವೆ,” ಎಂದು ಸರ್ಚ್ ಪ್ರೊಡಕ್ಟ್ ಲೀಡ್ ಆಡಂ ಫ್ರೈ ವಿವರಿಸಿದರು.
Microsoft ಮತ್ತು OpenAI ಸಂಬಂಧಗಳಿಗೆ ಪ್ರಶ್ನೆ:
ಈ ಫೀಚರ್ ಪರಿಚಯದ ಮೂಲಕ OpenAI, Microsoft ನ Bing ಮತ್ತು Google ನ AI-ಪವರ್‌ಡ್ ಸರ್ಚ್ ಟೂಲ್ಸ್‌ಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ. OpenAIನ ಈ ನಿರ್ಧಾರದಿಂದ Microsoft ಮತ್ತು OpenAI ನಡುವಿನ ಸಂಬಂಧಗಳ ಮೇಲೆ ಜನರ ಗಮನ ಹರಿದಿದೆ.
“ಇನ್ನು ಮುಂದೆ ಕೇವಲ ಪ್ರಶ್ನೆ ಕೇಳಿ, ನಮ್ಮಲ್ಲಿ ಉತ್ತರ ಪಡೆಯಿರಿ – ಬದಲಾಯಿಸುತ್ತಿದೆ AI ಮತ್ತು ಅಂತರ್ಜಾಲ ಸರ್ಚ್‌ನ ಭವಿಷ್ಯ!” OpenAIನ ಈ ಹೊಸ ಹೆಜ್ಜೆ ಟೆಕ್ ಜಗತ್ತಿನಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದೆ.