ರಾಜ್ಯವನ್ನೇ ಬೆಚ್ಚಿಬೀಳಿಸಿದ ಸಿದ್ದೇನಹಳ್ಳಿ ಕೊಲೆ ಪ್ರಕರಣ: ಪತ್ನಿ ಮೇಲಿನ ಅನುಮಾನವೇ ಇದಕ್ಕೆ ಕಾರಣ?!
ಬೆಂಗಳೂರು: ಜನರು ನಿದ್ರಿಸುತ್ತಿದ್ದಾಗ, ಒಂದು ಮನಕಲುಕುವ ಕ್ರೌರ್ಯ ನಡೆದಿತ್ತು. ಸಿದ್ದೇನಹಳ್ಳಿ ನಿವಾಸಿ ನಿಜಾಮುದ್ದೀನ್ ತನ್ನ ಪತ್ನಿ ರುಬಿಯಾ (30) ಅವರನ್ನು ಅವರೇ ಧರಿಸಿದ್ದ ಹಿಜಾಬ್ ಬಳಸಿ ಹತ್ಯೆ ಮಾಡಿ, ಬಳಿಕ ನೇರವಾಗಿ ಸೂಲಿಬೆಲೆ ಪೊಲೀಸ್ ಠಾಣೆಗೆ ತೆರಳಿ ತಾನೇ ಈ ಅಪರಾಧ ಎಸಗಿದೇನೆಂದು ಒಪ್ಪಿಕೊಂಡಿದ್ದಾನೆ.
ಹಾಗಾದರೆ ಏನು ಘಟನೇ ನಡೆಯಿತು?
ಗುರುವಾರ ರಾತ್ರಿ 10.30ರ ಸುಮಾರಿಗೆ ದಂಪತಿ ಸ್ಕೂಟರ್‌ನಲ್ಲಿ ತಮ್ಮ ಗ್ರಾಮದತ್ತ ಮರಳುತ್ತಿದ್ದರು. ಆದರೆ, ನಿಜಾಮುದ್ದೀನ್ ಸುಳ್ಳು ನೆಪ ಹೇಳಿ ಸ್ಕೂಟರ್ ನಿಲ್ಲಿಸಿ, ಜನಸಂಚಾರ ಇಲ್ಲದ, ಕತ್ತಲೆಯಿಂದ ಕೂಡಿದ ಸ್ಥಳವನ್ನು ಆಯ್ಕೆ ಮಾಡಿಕೊಂಡ. ಪತ್ನಿ ಸ್ಕೂಟರ್‌ನಿಂದ ಇಳಿದ ಕೂಡಲೇ, ಹಿಜಾಬ್ ಬಳಸಿ ಅವರ ಉಸಿರು ಕಟ್ಟಿಸಿ ಕೊಂದಿದ್ದಾನೆ. ಈ ಕ್ರೂರ ಕೃತ್ಯ ಮುಗಿದ ನಂತರ, ಅವರ ಶವವನ್ನು ಹಳ್ಳದ ಬದಿಗೆ ಎಳೆದು ಹಾಕಿ ನೇರವಾಗಿ ಪೊಲೀಸ್ ಠಾಣೆಗೆ ತೆರಳಿದ್ದಾನೆ!
ಅನೈತಿಕ ಪ್ರೇಮದ ಅನುಮಾನವೇ ಹತ್ಯೆಗೆ ಕಾರಣ?
ಪೊಲೀಸರ ಪ್ರಾಥಮಿಕ ತನಿಖೆಯಿಂದ ನಿಜಾಮುದ್ದೀನ್ ಪತ್ನಿಯ ಮೇಲೆ ಅನುಮಾನ ಹೊಂದಿದ್ದ ಎಂಬ ಮಾಹಿತಿ ಹೊರಬಿದ್ದಿದೆ. ಅದು ಸುಳ್ಳೋ? ಅಥವಾ ಸತ್ಯವೋ? ಎಂಬುದನ್ನು ತನಿಖೆ ಮುಂದುವರೆದ ನಂತರ ಮಾತ್ರ ಗೊತ್ತಾಗಬೇಕು.
ಹತ್ಯೆ ಪ್ರಕರಣದಲ್ಲಿ ಪತಿಯ ವಿರುದ್ಧ ಕಾನೂನು ಕ್ರಮ
ಸೂಲೆಬೆಲೆ ಪೊಲೀಸರು ಬಿಎನ್ಎಸ್ ಸೆಕ್ಷನ್ 103 (ಹತ್ಯೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ರುಬಿಯಾ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.