“A for ಆನಂದ್” ಮಕ್ಕಳ ಸಿನಿಮಾ ಘೋಷಣೆ: ಮಾಸ್ ಪಾತ್ರಗಳಿಂದ ‘ಮಾಸ್ಟರ್’ ಪಾತ್ರಕ್ಕೆ ಬಂದ ಶಿವಣ್ಣ..?!
ಬೆಂಗಳೂರು: ಕನ್ನಡದ ಪ್ರಖ್ಯಾತ ನಟ ಶಿವರಾಜ್ ಕುಮಾರ್, ಈ ಬಾರಿ ಮಾಸ್ ಹೀರೋನಿಂದ ‘ಭೋದಕ’ನಾಗಿ ಬದಲಾವಣೆ ಹೊಂದಲು ಸಿದ್ಧರಾಗಿದ್ದಾರೆ. ನವೆಂಬರ್ 14 ಮಕ್ಕಳ ದಿನಾಚರಣೆಯಂದು, ತಮ್ಮ ಹೊಸ ಚಿತ್ರ “A for ಆನಂದ್” ಅನ್ನು ಘೋಷಿಸಿರುವ ಶಿವಣ್ಣ, ಗೀತಾ ಪಿಕ್ಚರ್ಸ್ ನಿರ್ಮಾಣದ ಅಡಿಯಲ್ಲಿ ನಿರ್ದೇಶಕ ಶ್ರೀನಿಯೊಂದಿಗೆ ಮಕ್ಕಳ ಚಿತ್ರದಲ್ಲಿ ಹೊಸ ಪಯಣ ಆರಂಭಿಸುತ್ತಿದ್ದಾರೆ.
ಈ ಸಿನಿಮಾದ ವಿಶೇಷತೆಯೇನು? ಶಿವಣ್ಣ ಈ ಬಾರಿ ಕೇವಲ ಮಾಸ್ ಆಗಿ ಮಾತ್ರವಲ್ಲ, ಬೋಧಕನಾಗಿ ಕೂಡ ಬೆರಗುಗೊಳಿಸಲಿದ್ದಾರೆ! ಶಾಲೆಯ ಶಿಕ್ಷಕರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಶಿವಣ್ಣನಿಗೆ, ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ಚಿತ್ರದ ಮೂಲಕ ಸಾರುವ ಉದ್ದೇಶವಿದೆ.
ನೈಜ ಘಟನೆಯಾಧಾರಿತ ಸಿನಿಮಾ: “A for ಆನಂದ್” ಚಿತ್ರವು ನೈಜ ಘಟನೆಯಿಂದ ಪ್ರೇರಿತವಾಗಿದ್ದು, ಮಕ್ಕಳ ಪ್ರಗತಿಗೆ ಸಂಬಂಧಿಸಿದ ಸಂದೇಶವೊಂದನ್ನು ನೀಡಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಚಿತ್ರದ ತಾಂತ್ರಿಕ ತಂಡ: ನಿರ್ದೇಶಕ ಶ್ರೀನಿ ಹಾಗೂ ಮಹೇನ್ ಸಿಂಹ ಅವರ ಛಾಯಾಗ್ರಹಣ, ದೀಪು ಎಸ್. ಕುಮಾರ್ ಅವರ ಸಂಕಲನ, ಪ್ರಸನ್ನ ವಿ.ಎಂ ಅವರ ಸಂಭಾಷಣೆಗಳು ಚಿತ್ರಕ್ಕೆ ಸೇರ್ಪಡೆಯಾಗಿವೆ. 2025ರ ಮಾರ್ಚ್ ಅಥವಾ ಎಪ್ರಿಲ್ ತಿಂಗಳಲ್ಲಿ ಶೂಟಿಂಗ್ ಪ್ರಾರಂಭವಾಗಲಿದೆ.