ಭಾರತದಲ್ಲೂ ಬಾಂಗ್ಲಾದೇಶದಂತೆಯೇ ಪರಿಸ್ಥಿತಿ ಉಂಟಾಗಬಹುದು: ರೈತ ಮುಖಂಡನಿಂದ ಮೋದಿಗೆ ಬೆದರಿಕೆ!
ನವದೆಹಲಿ: ಕೃಷಿ ಚಳುವಳಿಯ ಮುಖಂಡ ಮತ್ತು ಭಾರತೀಯ ಕಿಸಾನ್ ಯೂನಿಯನ್‌ನ ಹಿರಿಯ ನಾಯಕ ರಾಕೇಶ್ ಟಿಕೈತ್ ಅವರು, ಮೋದಿ ಸರ್ಕಾರದ ವಿರುದ್ಧ ಗಂಭೀರ ಹೇಳಿಕೆ ನೀಡಿದ್ದಾರೆ. “ಭಾರತದಲ್ಲೂ ಬಾಂಗ್ಲಾದೇಶದಂತೆಯೇ ಪರಿಸ್ಥಿತಿ ಉಂಟಾಗಬಹುದು,” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಟಿಕೈತ್ ಅವರ ಪ್ರಕಾರ, “ನಾವು ಒಂದು ತಪ್ಪು ಮಾಡಿದೆವು. 25 ಲಕ್ಷ ರೈತರು ಲಾಲ್ ಕಿಲ್ಲಾಗೆ ಬದಲು ಸಂಸತ್ತಿಗೆ ಹೋಗಿದ್ದರೆ, ಆ ದಿನವೇ ನಮ್ಮ ಕೆಲಸ ಪೂರ್ಣವಾಗುತ್ತಿತ್ತು,” ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಸಂವಿಧಾನ ಪರವಾಗಿ ಪ್ರತಿಭಟನೆ ನಡೆಸಿದ ರೈತರಿಗೆ ಈಗಲೂ ನ್ಯಾಯ ಸಿಗದಿರುವುದರ ಬಗ್ಗೆ ಟಿಕೈತ್ ಬೇಸರ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಕೋಲ್ಕತ್ತಾದಲ್ಲಿ ನಡೆದ ಪ್ರಕರಣವನ್ನು ಉಲ್ಲೇಖಿಸಿ, “ಅವರು ಕೋಲ್ಕತ್ತಾ ಪ್ರಕರಣವನ್ನು ಹೈಲೈಟ್ ಮಾಡುತ್ತಿದ್ದಾರೆ. ಇದು ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ನಡೆಯುತ್ತಿರುವ ಸಂಚು. ಕಳೆದ 10 ದಿನಗಳಿಂದ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಪ್ರಚಾರ ನಡೆಸಲಾಗುತ್ತಿದೆ,” ಎಂದು ಟಿಕೈತ್ ಆರೋಪಿಸಿದರು.
ರಾಕೇಶ್ ಟಿಕೈತ್ ಅವರ ಈ ತೀಕ್ಷ್ಣ ಹೇಳಿಕೆಗಳು, ಇಂದಿನ ರಾಜಕೀಯ ವಾತಾವರಣವನ್ನು ಇನ್ನಷ್ಟು ಬಿಸಿಮಾಡಿವೆ. ಅವರು ಇತರ ರೈತ ನಾಯಕರು ಮತ್ತು ಬೆಂಬಲಿಗರೊಂದಿಗೆ ಮುಂದಿನ ಹೋರಾಟದ ತಂತ್ರಗಳನ್ನು ರೂಪಿಸುತ್ತಿದ್ದಾರೆ ಎಂಬುದಾಗಿ ಹೇಳಲಾಗಿದೆ.