India
ಅಟಲ್ ಸೇತು ಸೇತುವೆಯ ಮೇಲೆ ಆಯತಪ್ಪಿದ ಮಹಿಳೆ: ವಿಡಿಯೋ ನೋಡಿದರೆ ಎದೆ ಝಲ್ ಎನ್ನಬಹುದು!
ಮುಂಬೈ: ನಹವಾ ಶೇವಾದಲ್ಲಿರುವ ಅಟಲ್ ಸೇತು ಸಮುದ್ರ ಸೇತುವೆಯ ಮೇಲೆ 57 ವರ್ಷದ ಮಹಿಳೆ ಸಮತೋಲನ ಕಳೆದುಕೊಂಡು ಸಮುದ್ರದಲ್ಲಿ ಇನ್ನೇನು ಬೀಳಲು ಸನ್ನದ್ಧವಾಗಿದ್ದಾಗ ರಕ್ಷಿಸಲಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಘಟನೆ ಶುಕ್ರವಾರ ಸಂಜೆ 7 ಗಂಟೆಯ ಸುಮಾರಿಗೆ ನಡೆದಿದೆ.
“ಪೊಲೀಸರಿಗೆ ಮಹಿಳೆಯ ಇರುವಿಕೆ ಬಗ್ಗೆ ಮಾಹಿತಿ ದೊರೆತ ನಂತರ, ಗಸ್ತು ವಾಹನ ಸ್ಥಳಕ್ಕೆ ತಕ್ಷಣವೇ ದೌಡಾಯಿಸಿತು. ಮಹಿಳೆಯ ಹತ್ತಿರಕ್ಕೆ ಪೊಲೀಸರು ಬಂದಾಗ, ಅವರು ಸಮತೋಲನ ಕಳೆದುಕೊಂಡು ಸಮುದ್ರಕ್ಕೆ ಬೀಳಲು ಸನ್ನದ್ಧರಾಗಿದ್ದರು. ಆದರೆ ಚಾಕಚಕ್ಯತೆ ತೋರಿದ ಪೊಲೀಸ್ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಆಕೆಯನ್ನು ಹಿಡಿದು ರಕ್ಷಿಸಿದರು,” ಎಂದು ಅಧಿಕಾರಿಗಳು ಹೇಳಿದ್ದಾರೆ.