
ತೆಹ್ರಾನ್: ಇರಾನ್‌ನ ತೆಹ್ರಾನ್ ವಿಶ್ವವಿದ್ಯಾಲಯದಲ್ಲಿ ನಡೆದ ಘಟನೆ ಈ ಬಾರಿ ಹಿಜಾಬ್ ಕಾನೂನುಗಳ ವಿರುದ್ಧದ ಹೋರಾಟಕ್ಕೆ ಹೊಸ ಆಯಾಮ ತಂದು ಕೊಟ್ಟಿದೆ. ಇತರ ವಿದ್ಯಾರ್ಥಿಗಳ ನಡುವೆ ಹಿಜಾಬ್ ಕಿತ್ತೆಸೆದು ಒಳ ಉಡುಪಿನಲ್ಲೇ ಧೈರ್ಯದಿಂದ ನಿಂತ ವಿದ್ಯಾರ್ಥಿನಿಯೊಬ್ಬಳು ದೇಶಾದ್ಯಾಂತ ಚರ್ಚೆಗೆ ಗ್ರಾಸವಾಗಿದ್ದು, ಇಸ್ಲಾಮಿಕ್ ಗಣರಾಜ್ಯದಲ್ಲಿನ ಮಹಿಳಾ ಹಕ್ಕುಗಳಿಗೆ ಹೊಸ ಬದಲಾವಣೆಗೆ ಪ್ರೇರಣೆ ನೀಡಿದಂತಾಗಿದೆ.
ಈ ಘಟನೆಯಲ್ಲಿ, ಈ ವಿದ್ಯಾರ್ಥಿನಿಯ ಧೈರ್ಯ ಇಸ್ಲಾಮಿಕ್ ನಿಯಮಗಳ ವಿರುದ್ಧದ ಶಕ್ತಿಯ ಸಂಕೇತವಾಗಿದೆ. ಈ ಮೂಲಕ ಹಿಜಾಬ್ ಕಡ್ಡಾಯತೆಯನ್ನು ತಿರಸ್ಕರಿಸಿರುವ ಅವರ ಹೋರಾಟ ಇತರ ಯುವಜನಾಂಗಕ್ಕೂ, ವಿಶೇಷವಾಗಿ ಮಹಿಳೆಯರಿಗೂ ಪ್ರೇರಣೆಯಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ಘಟನೆಯು ಹರಿದಾಡುತ್ತಿದ್ದು, ದೇಶಾದ್ಯಾಂತ ನೂರಾರು ಜನರು ತಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ.
ಇಂತಹ ಹೆಜ್ಜೆಗಳು ಇರಾನ್‌ನಲ್ಲಿ ಮಹಿಳಾ ಸಮಾನತೆಯ ಕುರಿತ ಚರ್ಚೆಗಳಿಗೆ ಹೊಸ ದಿಕ್ಕು ತೋರಿಸುತ್ತಿವೆ. ಹಿಜಾಬ್ ಕಾನೂನಿಗೆ ಬದ್ಧವಾಗಿರಬೇಕಾದ ಸಂಕುಚತೆಯನ್ನು ತೊರೆದ ಮಹಿಳೆಯರು, ಈಗ ಸರಕಾರದ ಮೇಲೆ ಒತ್ತಡವನ್ನು ಹೆಚ್ಚಿಸುತ್ತಿದ್ದಾರೆ. ಇಂತಹ ಪ್ರಚೋದಿತ ಪ್ರತಿಭಟನೆಗಳು ಈಗ ಇಸ್ಲಾಮಿಕ್ ನಿಯಮಗಳ ವಿರುದ್ಧ ಬಲಿಷ್ಠ ಚಳುವಳಿ ಸೃಷ್ಟಿಸುತ್ತಿವೆ.
ಇರಾನ್‌ನಲ್ಲಿ ಮಹಿಳೆಯರ ಹಕ್ಕುಗಳ ಪರ ನಡೆಯುತ್ತಿರುವ ಈ ಚಳುವಳಿಯು, ಮುಂದಿನ ದಶಕಗಳಲ್ಲಿ ಭಾರೀ ಪ್ರಮಾಣದ ಬದಲಾವಣೆಗಳಿಗೆ ಕಾರಣವಾಗಬಹುದೆಂಬ ನಿರೀಕ್ಷೆ ಮೂಡಿಸಿದೆ. ಈ ಧೈರ್ಯಕ್ಕೆ ಬೆಂಬಲವಾಗುತ್ತಿರುವ ಪ್ರಪಂಚವು, ಮಹಿಳೆಯರ ಸಾಮರ್ಥ್ಯವನ್ನು ಮತ್ತೊಮ್ಮೆ ಪ್ರಶಂಸಿಸುತ್ತಿದೆ.