ಇನ್ನು “ಆಟೋ ಸವಾರಿ ಬಲು ದುಬಾರಿ” ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಕೆ

ಬೆಂಗಳೂರು: ಈಗಾಗಲೆ ಕೆಎಸ್ಆರ್‌ಟಿಸಿ, ಬಿಎಂಟಿಸಿ, ನಮ್ಮ ಮೆಟ್ರೋ ದರಗಳ ಹೆಚ್ಚಳದ ಹೊಡೆತವನ್ನೆ ತಾಳಲಾರದೆ ನಲುಗುತ್ತಿರುವ ಬೆಂಗಳೂರಿನ ಜನತೆಗೆ ಈಗ ಆಟೋ-ರಿಕ್ಷಾ ಬಿಸಿ ಮುಟ್ಟಿಸಲು ಮುಂದಾಗಿದೆ.

ಈ ಹಿಂದೆ 2021ರಲ್ಲಿ ಆಟೋ ದರ ಹೆಚ್ಚಳವಾಗಿತ್ತು ಆದರೆ ಆಗ ಎಲ್ಪಿಜಿ ಇಂಧನದ ಬೆಲೆ ಪ್ರತಿ ಕೆಜಿಗೆ ರೂ.68 ಇತ್ತು ಆದರೆ ಇಗ ಪ್ರತಿ ಕೆಜಿಗೆ ರೂ.88 ಆಗಿದೆ ಆದಕಾರಣ ಬೆಲೆ ಹೆಚ್ಚಳಮಾಡಲೆಬೇಕು ಎಂಬ ಕೂಗು ಕೇಳಿಬರುತ್ತಿತ್ತು, ಈ ಕಾರಣವಷ್ಟೆ ಅಲ್ಲದೆ ನಮ್ಮ ಮೆಟ್ರೋ ನಾಲ್ಕು ದಿಕ್ಕಿನಲ್ಲಿ ಸೇವೆ ಸಲ್ಲಿಸುತ್ತಿದೆ ಹಾಗಾಗಿ ದೂರದಿಂದ ಉದ್ಯೋಗಕ್ಕೆ, ಶಾಲಾ-ಕಾಲೇಜಿಗೆ ಬರುವ ಇತರ ಕೆಲಸಕ್ಕೆ ನಗರಕ್ಕೆ ಬರುವ ವೃದ್ದರಿಗೆ ನಮ್ಮ ಮೆಟ್ರೋ ಈಗಾಗಲೆ ಸೇವೆ ನೀಡುತ್ತಿದೆ ಮತ್ತು ನಗರದಲ್ಲಿ ಬೈಕ್ ಟ್ಯಾಕ್ಸಿಗಳ ಹಾವಳಿ ಹೆಚ್ಚುತ್ತಲೆ ಇದೆ ಈ ಕಾರಣದಿಂದಾಗಿಯೂ ಸಹ ಆಟೋ ಚಾಲಕರಿಗೆ ಹಿಂದಿನಷ್ಟು ಪ್ರಾಯಾಣಿಕರು ಸಿಗುತ್ತಿಲ್ಲ ಹಾಗೂ ಹೆಚ್ಚು ಜನ ಆಟೋಗಳ ಕಡೆ ಮುಖ ಮಾಡುತ್ತಿಲ್ಲ.

ಇವೆಲ್ಲಾ ಕಾರಣದಿಂದಾಗಿ ಮಾ.12 ರಂದು ಡಿಪ್ಯೂಟಿ ಕಮಿಷನರ್ ಆಫ್ ಪೊಲೀಸ್ (ಟ್ರಾಫಿಕ್-ಈಸ್ಟ್) ಅಧಕ್ಷತೆಯಲ್ಲಿ ಆಟೋ ಮೀಟರ್ ದರವನ್ನು ಏರಿಸುವ ಬಗ್ಗೆ ನಿರ್ಧಾರ ಕೈಗೂಳ್ಳಲು ಸಭೆಯನ್ನು ಕರೆಯಲಾಗಿತ್ತು ಈ ಸಭೆಗೆ ಜಿಲ್ಲಾ ಸಾರಿಗೆ ಇಲಾಖೆಯ ಅಧಿಕಾರಿಗಳು ಹಾಗೂ ಎಲ್ಲಾ ಆಟೋ ಮಾಲಿಕರ ಸಂಘದ/ಸಂಘಟನೆಯ ಅಧ್ಯಕ್ಷರು, ರಾಜಾಜಿನಗರ ಹಾಗೂ ಜಯನಗರ ಆರ್‌ಟಿಓ ಅಧಿಕಾರಿಗಳು, ಚಾಲಕರ ಸಂಘದ ಹಾಗೂ ಇನ್ನಿತರ ಪಧಾದಿಕಾರಿಗಳು ಭಾಗವಹಿಸಿದ್ದರು, ಆದರೆ ಈ ಸಭೆಯಲ್ಲಿ “ಸದ್ಯ ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ ಅವುಗಳನ್ನು ನಿರ್ಬಂಧಿಸುವ ತನಕ ದರ ಹೆಚ್ಚಿಸುವುದು ಬೇಡ ಎಂದು” ಕೆಲವು ಸಂಘದ ಮುಖಂಡರು ಪಟ್ಟು ಹಿಡಿದರು ಅದಾಗಿಯೂ ಸಭೆಯಲ್ಲಿ ದರ ವಿಷಯದ ಕುರಿತು ಚರ್ಚೆ ನಡೆಯಿತು.
ಸದ್ಯ ಬೆಂಗಳೂರಿನಲ್ಲಿ 2 ಕಿ,ಮೀ ತನಕ ರೂ.30 ಇದೆ ಅದನ್ನು ರೂ.40ಕ್ಕೆ ಏರಿಸಬೇಕು ಹಾಗೂ 2 ಕಿ,ಮೀ ನಂತರ ಪ್ರತಿ 1.5 ಕಿ.ಮೀ.ಗೆ ರೂ.20 ದರ ಹೆಚ್ಚಿಸಿ ದರ ವಿಧಿಸಬೇಕೆಂದು ಪ್ರಾಸ್ತಾವನೆ ಸಲ್ಲಿಸಿದರು, ಈ ಪ್ರಾಸ್ತಾವನೆಯನ್ನು ಜಿಲ್ಲಾ ಸಾರಿಗೆ ಇಲಾಖೆ ಸಮಿತಿ ಸದಸ್ಯರ ಜೂತೆ ಪುನಃ ಚರ್ಚಿಸಿ ನಂತರ ದರ ಏರಿಕೆಯ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕಾರ್ಯದರ್ಶಿಗಳು ತಿಳಿಸಿದರು ಈ ಸಮಿತಿಯಲ್ಲಿ 10 ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (RTO), ಡಿಪ್ಯುಟಿ ಕಮಿಷನರ್ಸ್ ಆಫ್ ಪೊಲೀಸ್ (ಟ್ರಾಫಿಕ್) ಮತ್ತು ಚಾಲಕರ ಸಂಘಗಳ ಪ್ರತಿನಿಧಿಗಳು ಸದಸ್ಯರಾಗಿದ್ದಾರೆ. ಅಂತಿಮವಾದ ಅಧಿಕೃತ ದರ ಪರಿಷ್ಕರಣೆಯ ಪಟ್ಟಿಗಾಗಿ ಕಾಯಬೇಕಿದೆ.
ಗಿರೀಶ್ ವಸಿಷ್ಟ ಬಿ,ಎಸ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿ