BengaluruEntertainment
ನಟ ದರ್ಶನ್ ಖುದ್ದು ರೇಣುಕಾ ಸ್ವಾಮಿಯನ್ನು ಕರೆಸಿಕೊಂಡಿದ್ದರಾ?

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತ ದರ್ಶನ ಆಪ್ತ ಸ್ನೇಹಿತೆ ಪವಿತ್ರ ಗೌಡ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾನೆ ಎಂದು, ಅವರನ್ನು ತಮ್ಮ ಚಿತ್ರದುರ್ಗ ಅಭಿಮಾನಿಗಳ ಸಂಘದ ಕೆಲ ಅಭಿಮಾನಿಗಳ ಮೂಲಕ ರೇಣುಕಾ ಸ್ವಾಮಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ.
ತದನಂತರ ಸ್ವಾಮಿ ಅವರನ್ನು ಕಿಡ್ನಾಪ್ ಮಾಡಿ ಬೆಂಗಳೂರಿನಲ್ಲಿ ಇರುವ ನಟ ದರ್ಶನ್ ಸ್ನೇಹಿತನ ಫಾರ್ಮ್ ಹೌಸ್ ನ ಶೆಡ್ ನಲ್ಲಿ ಕೂಡು ಹಾಕಿದ್ದರು. ಜೂನ್ 08ರಂದು ಈ ಘಟನೆ ಆಗಿದೆ ಎಂದು ತಿಳಿದುಬಂದಿದೆ. ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಬೇಕಾದರೆ ನಟ ದರ್ಶನ್ ಖುದ್ದು ಉಪಸ್ಥಿತರಿದ್ದರು ಎಂದು ಹೇಳಲಾಗುತ್ತಿದೆ.