ಇತಿಹಾಸ ಸೃಷ್ಟಿಸಿದ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ.
ಕಿಂಗ್ಸ್ ಟೌನ್: ವೆಸ್ಟ್ ಇಂಡೀಸ್‌ನ ಕಿಂಗ್ಸ್ ಟೌನ್ ನಗರದಲ್ಲಿರುವ ಅರ್ನೋಸ್ ವೇಲ್ ಕ್ರೀಡಾಂಗಣದಲ್ಲಿ ಇಂದು ಇತಿಹಾಸ ಸೃಷ್ಟಿಸಿದೆ ಅಫ್ಘಾನಿಸ್ತಾನ ಕ್ರಿಕೆಟ್ ತಂಡ. ವಿಶ್ವ ಕಪ್ ಪಂದ್ಯಾವಳಿಗಳ ಇತಿಹಾಸದಲ್ಲಿ ಅಫ್ಘಾನಿಸ್ತಾನ್ ತಂಡ ಮೊಟ್ಟ ಮೊದಲ ಬಾರಿಗೆ ಸೆಮಿಫೈನಲ್ ಹಂತವನ್ನು ತಲುಪಿದೆ. ಬಲಾಡ್ಯ ಬಾಂಗ್ಲಾದೇಶವನ್ನು ಮಣಿಸಿದ ಅಫ್ಘಾನಿಸ್ತಾನ ತಂಡ, ತನ್ನ ಮುಂದಿನ ಕ್ರಿಕೆಟ್ ಪೀಳಿಗೆಗೆ ಹೊಸ ಗುರಿಯನ್ನು ಸೃಷ್ಟಿ ಮಾಡಿದೆ.
ಈ ಪಂದ್ಯದ ಟಾಸ್ ಗೆದ್ದ ಆಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. 20 ಓವರ್ ಗಳಲ್ಲಿ ತನ್ನ 5 ವಿಕೆಟ್ಗಳನ್ನು ಕಳೆದುಕೊಂಡು, ಅಫ್ಘಾನಿಸ್ತಾನ್ ತಂಡ 115 ರನ್ನುಗಳನ್ನು ಕಲೆ ಹಾಕಿತು. ಇದನ್ನು ಬೆನ್ನಟ್ಟಿದ ಬಾಂಗ್ಲಾದೇಶ ತಂಡ, 17.5 ಓವರ್ ಗಳಲ್ಲಿ ತನ್ನ ಎಲ್ಲಾ ವಿಕೆಟುಗಳನ್ನು ಕಳೆದುಕೊಂಡು, 105 ರನ್ನುಗಳನ್ನು ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಆಫ್ಘಾನಿಸ್ತಾನ ತಂಡ 8 ರನ್ನುಗಳ ರೋಚಕ ಗೆಲುವನ್ನು ಪಡೆಯಿತು.
ಈ ಪಂದ್ಯದ ಪದ್ಯದ ಶ್ರೇಷ್ಠ ಪ್ರಶಸ್ತಿಯನ್ನು ನವೀನ್ ಉಲ್-ಹಕ್ ಪಡೆದರು. ಇವರು 3.5 ಓವರ್ ಗಳಲ್ಲಿ 26 ರನ್ನುಗಳನ್ನು ನೀಡಿ 4 ವಿಕೆಟ್ ಕಬಳಿಸಿದ್ದರು.