Alma Corner

ಮತ್ತೆ ಅಭಿವೃದ್ದಿಯ ಪಥದತ್ತ ಬಿಎಸ್‌ಎನ್‌ಎಲ್‌..!

ಒಂದು ಕಾಲ ಇತ್ತು, BSNL ಟೆಲಿಕಾಂ ಕ್ಷೇತ್ರವನ್ನು ಆಳಿದಕಾಲ ರಾಜನಾಗಿ ಮೆರೆದಂತ ಕಾಲ. BSNL ಎಂದರೆ ಅದು ಒಂದು ಟೆಲಿಕಾಂ ಸಂಸ್ಥೆ ಮಾತ್ರ ಅಲ್ಲ ಅದರ ಜೊತೆಗೆ ಒಂದು ಭಾವನಾತ್ಮಕ ಸಂಬಂಧ ಬೇರೂರಿತ್ತು. jio, airtel, ವೊಡಾಫೋನ್ ಗಳಿಂದ ಖಾಸಗಿ ಕಂಪನಿಗಳು ತಲುಪದೇ ಇರುವಂತಹ ಜಾಗಗಳನ್ನ ಬಿಎಸ್ಎನ್ಎಲ್ ತಲುಪಿತ್ತು. ಬಿಎಸ್ಎನ್ಎಲ್ ಟೆಲಿಕಾಂ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದ್ದು ಆಗಿನಿಂದ ಒಂದು ಹೊಸ ಕ್ರಾಂತಿಯನ್ನು ಸೃಷ್ಟಿಸಿತ್ತು. ಬಿಎಸ್ಎನ್ಎಲ್ ಹಳ್ಳಿಗಳ ಪ್ರತಿಯೊಂದು ಮೂಲೆ ಮೂಲೆಗಳಿಗೂ ತನ್ನ ಇರುವೆಕೆಯನ್ನು ಹೇಳ್ತಾ ಇತ್ತು. ಆದರೆ ಯಾವ ಏರ್ಟೆಲ್ ಜಿಯೋ ಕಂಪನಿಗಳು ಟೆಲಿಕಾಂ ಕ್ಷೇತ್ರಕ್ಕೆ ಲಗ್ಗೆ ಇಟ್ಟವೊ ಅಲ್ಲಿಂದ BSNL ನ ಅದಪತನ ಶುರುವಾಯ್ತು. ಸರ್ಕಾರಿ ಸೌಮ್ಯದ ಕಂಪನಿ ಆದಂತಹ BSNL ಏರ್ಟೆಲ್ ಮತ್ತು ಜಿಯೋ ಗಳಿಗೆ ಸ್ಪರ್ಧೆಯನ್ನು ನೀಡಬಹುದಾಗಿತ್ತು ಆದರೆ ಸರ್ಕಾರದಲ್ಲಿನ ಭ್ರಷ್ಟಾಚಾರ ಕೆಲವೊಂದು ಲೋಪಗಳಿಂದ ಯಶಸ್ಸಿನ ಶಿಖರದಲ್ಲಿದ್ದ ಕುಸಿದು ಪಾತಾಳಕ್ಕೆ ಬಿದ್ದಿತ್ತು. ಎಷ್ಟರಮಟ್ಟಿಗೆ ಎಂದರೆ ಇನ್ನು ಯಾವುದೇ ಲಾಭವಿಲ್ಲ ಎಂದು ತೀರ್ಮಾನಿಸಿ ಕಂಪನಿಯನ್ನ ಮುಚ್ಚುವ ಹಂತಕ್ಕೆ ಸರ್ಕಾರ ಬಂದಿತ್ತು. ಆದರೆ ಈಗ ಹೊಸ ಮೈಲಿಗಳನ್ನು ಇಡುವುದಕ್ಕೆ ಬಿಎಸ್ಎನ್ಎಲ್ ತಯಾರಿಯನ್ನು ಮಾಡಿಕೊಳ್ಳುತ್ತಿದ್ದೆ.


2000 ದಿಂದ 2007 ರವರೆಗೆ ಬಿಎಸ್ಎನ್ಎಲ್ 47 ಸಾವಿರ ಕೋಟಿಯಷ್ಟು ಲಾಭವನ್ನು ಗಳಿಸಿತ್ತು. ಕೇಂದ್ರ ಸರ್ಕಾರಕ್ಕೆ ದುಡ್ಡಿನ ಮಳೆಯನ್ನೇ ಹರುಸ್ತಾ ಇತ್ತು. ಆ ಸಂದರ್ಭದಲ್ಲಿ BSNL ಆಗ ಸರ್ಕಾರದ ಬಹುದೊಡ್ಡ ಆದಾಯದ ಮೂಲವಾಗಿತ್ತು. ಭಾರತದಲ್ಲಿ ಲ್ಯಾಂಡ್ ಲೈನ್ ಸೇವೆಗಳ ಏಕೈಕ ಪೂರೈಕೆದಾರರಾಗಿ ಐದು ವರ್ಷಗಳವರೆಗೆ ಏಕಸಾಮ್ಯವನ್ನು ಸಾಧಿಸಿತ್ತು. ಕೈಗೆಟುಕುವ ದರದಲ್ಲಿ ದರವನ್ನ ವಿಧಿಸಿ ಕುಗ್ರಾಮಗಳಿಗೂ ಬಿಎಸ್ಎನ್ಎಲ್ ತಲುಪಿತ್ತು. ಲ್ಯಾಂಡ್ ಲೈನ್ ಬ್ರಾಡ್ ಬ್ಯಾಂಡ್ ಮಾರುಕಟ್ಟೆಯಲ್ಲಿ 75 ಕ್ಕಿಂತ ಹೆಚ್ಚು ಪಾಲನ್ನು ಹೊಂದಿತ್ತು. ಆದರೆ ಕೆಲವು ವರ್ಷಗಳು ಕಳೆದಂತೆ BSNL ತನ್ನ ಕಾರ್ಯವ್ಯಾಪ್ತಿಯನ್ನ ವಿಸ್ತರಿಸಿಕೊಳ್ಳಲೇ ಇಲ್ಲಾ ಬೇರೆ jio, airtel, ವೊಡಾಫೋನ್ಗಳು ಕಾಲಕ್ಕೆ ತಕ್ಕಂತೆ ಬದಲಾವಣೆಯನ್ನ ಮಾಡಿಕೊಳ್ತಾ ಇದ್ರೆ, 4G 5Gg ಗಳನ್ನ ಅಳವಡಿಸಿಕೊಳ್ತಾ ಇದ್ರೆ, ಇತ್ತ BSNL ಮಾತ್ರ 2G ಸೀಮಿತವಾಗಿತ್ತು. ಹೀಗೆಲ್ಲ ಇದ್ದಂತಹ ಬಿಎಸ್ಎನ್ಎಲ್ 2G ಹಗರಣ, ಭ್ರಷ್ಟಾಚಾರ, ಅಧಿಕಾರದಲ್ಲಿ ಆದಂತಹ ಕೆಲವೊಂದು ಲೋಪಗಳು ಇದೆಲ್ಲದರಿಂದ BSNL ಗೆ ಟೆಂಡರ್‌ನ hold ಮಾಡೋದಕ್ಕೆ ಕೇಂದ್ರ ಸರ್ಕಾರ ಶುರು ಮಾಡ್ತು ಅಲ್ಲಿಂದ ಶುರುವಾಯಿತು. ಬಿಎಸ್ಎನ್ಎಲ್ ಕೇಡುಗಾಲ ಅಲ್ಲಿಂದ BSNL ಎಲ್ಲ ಲಾಭ ಕುಸಿತ ಬಂತು.


ವೊಡಾಫೋನ್ ಏರ್ಟೆಲ್ ಜಿಯೋ ಕಂಪನಿಗಳು ಮೂಲಸೌಕರ್ಯಗಳನ್ನು ಹೆಚ್ಚಿಸಿ ಮಾರುಕಟ್ಟೆಯನ್ನು ದೊಡ್ಡದಾಗಿ ಮಾಡಿ BSNL ಸ್ಥಾನವನ್ನ ಈ ಖಾಸಗಿ ಕಂಪನಿಗಳು ತಮ್ಮ ಹಿಡಿತಕ್ಕೆ ತೆಗೆದುಕೊಂಡವು. 4g,5g ಬಂದ ಮೇಲಂತೂ BSNL ಇನ್ನೂ ಕುಸಿಯೋದಕ್ಕೆ ಶುರುವಾಯಿತು. 2007ರಲ್ಲಿ 39,000 ಸಾವಿರ ಕೋಟಿ ಲಾಭದಲಿದ್ದ BSNL 2020ರ ಹೊತ್ತಿಗೆ ರೂ.33,000 ಸಾವಿರ ಕೋಟಿ ನಷ್ಟಕ್ಕೆ ಹೋಯಿತು. ಹಾಗಾಗಿ 2016ರಲ್ಲಿ ನೀತಿ ಆಯೋಗ BSNL ಮುಚ್ಚಬೇಕು ಎಂಬ ತೀರ್ಮಾನಕ್ಕೆ ಬಂತು ಯಾಕಂದ್ರೆ BSNL ನಿಂದ ಯಾವುದೇ ಲಾಭ ಬರುತ್ತಿರಲಿಲ್ಲ, ಬದಲಾಗಿ ನಷ್ಟದ ಹೊರೆಯನ್ನ ಸರ್ಕಾರ ಹೊರಬೇಕಾಗಿತ್ತು.
ಆದರೆ ಈಗ ಕೇಂದ್ರ ಸರ್ಕಾರ ಕಳೆದ ಐದು ವರ್ಷಗಳಿಂದ BSNL ಅಭಿವೃದ್ಧಿ ಮಾಡ್ಬೇಕು ಅಂತ ಪಣತೊಟ್ಟಿದೆ. 2019ರಲ್ಲಿ 69 ಸಾವಿರ ಕೋಟಿ, 2022 ರಲ್ಲಿ 1.64 ಲಕ್ಷ ಕೋಟಿ, 2023ರಲ್ಲಿ 894782 ಕೋಟಿ ಹಣವನ್ನು BSNL ಮೇಲೆ ಕೇಂದ್ರ ಸರ್ಕಾರ ಹೂಡಿಕೆಯನ್ನು ಮಾಡಿತ್ತು. ಬರೋಬ್ಬರಿ ಮೂರು ಲಕ್ಷ ಕೋಟಿಯನ್ನ BSNL ಮೇಲೆ ಹಾಕಿತ್ತು. ಏರ್ಟೆಲ್ ವಡ ಫೋನ್ ಹಾಗೆ ಜಿಯೋ ಕಂಪನಿಗಳಿಗೆ ಸ್ಪರ್ಧೆಯನ್ನು ನೀಡುವುದಕ್ಕೆ ಮತ್ತು BSNL ಅನ್ನ ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗುವುದಕ್ಕೆ 4ಜಿಯನ್ನ ಅಳವಡಿಕೆ ಮಾಡಿಕೊಂಡು ಇದರ ಜೊತೆಗೆ TCH ಜೊತೆಗೆ ಒಪ್ಪಂದವನ್ನು ಮಾಡಿಕೊಂಡು ಡೇಟ್ ಆಫ್ ಸೆಂಟರ್ ಗಳನ್ನು ನಿರ್ಮಿಸಿದೆ. ಜೊತೆಗೆ ಬಿಎಸ್ಎನ್ಎಲ್ 75000 ಹೊಸ 4ಜಿ ಟವರ್ ಗಳನ್ನು ನಿರ್ಮಿಸಿದ್ದು, ಇದರಿಂದ ಸಾವಿರಾರು ಕಡೆ 4G ನೆಟ್ವರ್ಕ್ ಕೊಡೋದಿಕ್ಕೆ ಸಾಧ್ಯ ಆಗಿದೆ.

ಏರ್ಟೆಲ್ ಮತ್ತು ಜಿಯೋ ಕಂಪನಿಗಳು ತಮ್ಮ ಸ್ಪರ್ಧೆಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಡಾಟಾ ದರವನ್ನು ಹೆಚ್ಚಿಗೆ ಮಾಡ್ತಾ ಇದ್ರೆ BSNL ಮಾತ್ರ ದರವನ್ನ ಕಡಿಮೆ ಮಾಡ್ತಾ ಬಂತು. 199 ರೂಪಾಯಿಗೆ 70 ದಿನಗಳ ವರೆಗೆ ಅನ್ಲಿಮಿಟೆಡ್ ಕಾಲ್, 1999 ರೂಪಾಯಿಗೆ ಒಂದು ವರ್ಷಕ್ಕೆ 600 ಜಿಬಿಯನ್ನ ನೀಡ್ತಾ ಬಂತು. ಜೊತೆಗೆ 4g ಡಾಟಾವನ್ನು ನೀಡುವ ಯೋಚನೆಯನ್ನು ತೆಗೆದುಕೊಂಡು ಬಂತು. ಈ ಕಾರಣದಿಂದಾಗಿ BSNL ಗೆ ಪೋರ್ಟ್ ಆಗುವರ ಸಂಖ್ಯೆ ಹೆಚ್ಚಾಯ್ತು ಅದರಲ್ಲಿಯೂ ಉತ್ತರ ಭಾರತದಲ್ಲಿ ಹೆಚ್ಚಾಗಿ BSNL ಉಪಯೋಗಿಸುವವರ ಇದ್ದಾರೆ. ಯಾಕೆಂದರೆ ಅಲ್ಲಿ ಹೆಚ್ಚಾಗಿ ಬಡತನ ಇರೋದ್ರಿಂದ ಜನರು ಹೆಚ್ಚಿನ ಮೊತ್ತದ ಡಾಟಾ ಬಳಿ ಹೋಗೋದಿಲ್ಲ ಕಡಿಮೆ ದರದ ಡಾಟಾವನ್ನು ಹುಡುಕುತ್ತಾರೆ. ಇದಕ್ಕೆ ಬಿಎಸ್ಎನ್ಎಲ್ ಅವರಿಗೆ ಸಹಾಯ ಮಾಡ್ತು, ಆದ್ದರಿಂದ ಬಿಎಸ್ಎನ್ಎಲ್ ಕಡೆಗೆ ಜನರು ಆಸಕ್ತಿಯನ್ನು ತೋರಿಸೋದಕ್ಕೆ ಶುರು ಮಾಡಿದ್ರು ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ BSNL ಕೂಡ ತನ್ನಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡಿಕೊಳ್ಳುತ್ತಿದ್ದೆ. ತನ್ನ ಕೆಲಸದಲ್ಲಿ, ಕಾರ್ಯವೈಖರಿಯಲ್ಲಿ ಹೆಚ್ಚು ಬದಲಾವಣೆಯನ್ನು ಮಾಡಿಕೊಳ್ಳುತ್ತಿದೆ ಹಾಗೆ ಕೆಲವೊಂದು ಟಾರ್ಗೆಟ್ ಗಳನ್ನು ಸಹ ಹಾಕಿಕೊಂಡು ಕೆಲಸವನ್ನು ಮಾಡ್ತಾ ಇದೆ. ಹೀಗೆ BSNL ತನ್ನ ಕಾರ್ಯವೈಖರಿಯ ಇನ್ನು ಪರಿಣಾಮಕಾರಿಯಾಗಿ ಬದಲಾವಣೆ ಮಾಡಿಕೊಂಡು ಬೇರೆ ಯಾವುದೇ ಖಾಸಗಿ ಕಂಪನಿಗಳಿಗೂ ಕಡಿಮೆ ಇಲ್ಲಾ ಅನ್ನುವ ರೀತಿಯಲ್ಲಿ ಕೆಲಸ ಮಾಡಬೇಕಿದೆ.

ಮೇಘಾ ಜಗದೀಶ್‌

ಆಲ್ಮಾ ಮೀಡಿಯಾ ಸ್ಕೂಲ್‌ ವಿದ್ಯಾರ್ಥಿನಿ

Show More

Related Articles

Leave a Reply

Your email address will not be published. Required fields are marked *

Back to top button