ದೆಹಲಿಯಲ್ಲಿ ಉಸಿರಾಟದ ಯದ್ಧ…!

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಗುರುವಾರ ಬೆಳಿಗ್ಗೆ ದೆಹಲಿಯ ವಾಯು ಗುಣಮಟ್ಟ ಅಲ್ಪಪ್ರಮಾಣದಲ್ಲಿ ಸುಧಾರಿಸಿದೆ. ವಾಯು ಗುಣಮಟ್ಟ ಸೂಚ್ಯಂಕ 161ಕ್ಕೆ ಇಳಿದಿದ್ದು, ಇನ್ನೂ ಎರಡು-ಮೂರು ದಿನಗಳಲ್ಲಿ ಈ ಪರಿಸ್ಥಿತಿ ಇನ್ನಷ್ಟು ಸುಧಾರಣೆ ಆಗುವ ನಿರೀಕ್ಷೆಯಿದೆ.
ಆದಾಗಿಯೂ, ಆರ್.ಕೆ. ಪುರಂ, ಜಹಾಂಗೀರ್ ಪುರಿ ಮತ್ತು ಮುಂಡ್ಕಾದಂತಹ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಕಳಪೆಯಾಗೇ ಉಳಿದಿದೆ.
ದೆಹಲಿಯಲ್ಲಿ ಇಂದು ಕನಿಷ್ಠ ತಾಪಮಾನ 9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಗಾಳಿಯಲ್ಲಿ ಮಂಜು ಕಾಣಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ತಾಪಮಾನ ಇನ್ನಷ್ಟು ಇಳಿಕೆ ಕಾಣುವ ನಿರೀಕ್ಷೆಯಿದೆ.
ಗಾಳಿಯ ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಸಂಶೋಧನೆಯ ವ್ಯವಸ್ಥೆಯು(The System of Air Quality and Weather Forecasting and Research-SAFAR) ವಾಯು ಗುಣಮಟ್ಟ ಸೂಚ್ಯಂಕವನ್ನು ಈ ಕೆಳಗಿನ ವರ್ಗಗಳಾಗಿ ವರ್ಗೀಕರಿಸುತ್ತದೆ:
0-50 (ಒಳ್ಳೆಯದು)
51-100 (ತೃಪ್ತಿದಾಯಕ)
101-200 (ಮಧ್ಯಮ)
201-300 (ಕಳಪೆ)
301-400 (ಅತ್ಯಂತ ಕಳಪೆ)
401-500 (ತೀವ್ರ ಕಳಪೆ)

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಈಗಾಗಲೇ ದೆಹಲಿಯ ವಾತಾವರಣ ಸಾಕಷ್ಟು ಮಲಿನಗೊಂಡಿದ್ದು, ಇದು ಇನ್ನಷ್ಟು ದಿನಗಳವರೆಗೂ ಮುಂದುವರೆಯುವುದಾಗಿ ಎಚ್ಚರಿಕೆಯನ್ನು ನೀಡಿದೆ. ಇದರಿಂದ ತೀವ್ರವಾದ ಉಸಿರಾಟದ ಕಾಯಿಲೆಗಳಿಗೆ ಉಲ್ಬಣಗೊಳ್ಳುವ ಭಯ ಎದುರಾಗಿದೆ. ಈ ಸಂಬಂದ ದೆಹಲಿಯಲ್ಲಿ ವಾಯುಮಾಲಿನ್ಯವನ್ನು ನಿಯಂತ್ರಿಸಲು ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP)-IV ಕ್ರಮಗಳನ್ನು ಸಡಿಲಿಸುವ ಪ್ರಸ್ತಾಪವನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿತು. ಈ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ಮುಂದಿನ ದಿನಗಳಲ್ಲಿ ವಿಚಾರಣೆ ನಡೆಸಲಿದೆ.
ಕೇಂದ್ರ ಸರ್ಕಾರಕ್ಕೆ ಎನ್ಜಿಟಿ ಸೂಚನೆ!
ರಾಷ್ಟ್ರೀಯ ಹಸಿರು ವಾಯು ಮಂಡಳಿ (ಎನ್.ಜಿ.ಟಿ), ಕೇಂದ್ರ ಸರ್ಕಾರದಿಂದ ದೆಹಲಿಯ ʼನಿರಂತರ ವಾಯು ಮಾಲಿನ್ಯʼವನ್ನು ಕುರಿತು ಪ್ರತಿಕ್ರಿಯೆ ಕೇಳಿದೆ. ವಾಯು ಮಾಲಿನ್ಯಕ್ಕೆ ಕಾರಣಗಳ ಕುರಿತು ನಡೆಸಿದ ಅಧ್ಯಯನದ ಆಧಾರದ ಮೇಲೆ, ಎನ್.ಜಿ.ಟಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದು ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.
ದೆಹಲಿಯ ಹವಾಮಾನ ಪರಿಸ್ಥಿತಿಗಳು ಮಾಲಿನ್ಯದ ಬಿಕ್ಕಟ್ಟನ್ನು ಇನ್ನಷ್ಟು ಹದಗೆಡಿಸುತ್ತಿದೆ ಎಂದು ಹಸಿರು ಸಮಿತಿ (ಗ್ರೀನ್ ಪ್ಯಾನೆಲ್) ಹೇಳಿದೆ.
ಧನ್ಯಾ ರೆಡ್ಡಿ ಎಸ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ